ಶನಿವಾರ, ಸೆಪ್ಟೆಂಬರ್ 18, 2021
30 °C

Ind vs Sl T20: ಭಾರತದ 5 ವಿಕೆಟ್‌ ಪತನ, 40 ರನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಋತುರಾಜ್ ಗಾಯಕವಾಡ್ ಕ್ಯಾಚ್‌ ಕೊಟ್ಟ ಸಂದರ್ಭ

ಕೊಲಂಬೊ: ಇಲ್ಲಿನ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ಭಾರತ–ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಟಿ20 ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಪಂದ್ಯದ ಆರಂಭದಲ್ಲೇ ಭಾರತಕ್ಕೆ ಆಘಾತ ಎದುರಾಗಿದೆ. ಪಂದ್ಯದ ಮೊದಲ ಓವರ್‌ನಲ್ಲೇ ಶಿಖರ್‌ ಧವನ್‌ (0),  ದುಷ್ಮಂತ ಚಾಮಿರಾ ಎಸೆತದಲ್ಲಿ ಕ್ಯಾಚ್‌ ಕೊಟ್ಟು ಹೊರ ನಡೆದರು. ಆರು ಓವರ್‌ಗಳಲ್ಲಿ ಭಾರತ ತಂಡವು 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 40 ರನ್‌ ಗಳಿಸಿದೆ. 

ಋತುರಾಜ್ ಗಾಯಕವಾಡ್ ಮತ್ತು ದೇವದತ್ತ ಪಡಿಕ್ಕಲ್ ಲಯ ಕಂಡುಕೊಳ್ಳುವ ಮುನ್ನವೇ ಪಂದ್ಯದ ಮೂರನೇ ಓವರ್‌ನಲ್ಲಿ ರಮೇಶ್ ಮೆಂಡಿಸ್ ಎಸೆತದಲ್ಲಿ ದೇವದತ್ತ ಪಡಿಕ್ಕಲ್ (9 ರನ್‌) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅನಂತರ ಕಣಕ್ಕಿಳಿದ ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್ ಖಾತೆ ತೆರೆಯುವ ಮುನ್ನವೇ ವಾಣಿಂದು ಹಸರಂಗ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಉತ್ತಮ ಪ್ರದರ್ಶನ ತೋರುತ್ತಿದ್ದ ಋತುರಾಜ್ ಗಾಯಕವಾಡ್ (14 ರನ್‌) ಸಹ ವಾಣಿಂದು ಹಸರಂಗ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ಹೊರ ನಡೆದರು. ನಾಯಕ ದಸುನ್ ಶನಾಕ ಮಾಡಿದ ಓವರ್‌ನಲ್ಲಿ ನಿತೀಶ್ ರಾಣಾ (6 ರನ್) ಕ್ಯಾಚ್‌ ನೀಡುವ ಮೂಲಕ ಹೋರಾಟ ಮುಗಿಸಿದರು.

ಸದ್ಯ ಭುವನೇಶ್ವರ್‌ ಕುಮಾರ್ (9 ರನ್‌) ಮತ್ತು ಕುಲದೀಪ್ ಯಾದವ್ (1 ರನ್) ಕಣದಲ್ಲಿದ್ದಾರೆ.

ಬುಧವಾರ ನಡೆಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಜಯ ಸಾಧಿಸಿತು. ಮೂರು ಪಂದ್ಯಗಳ ಕ್ರಿಕೆಟ್‌ ಸರಣಿಯಲ್ಲಿ ಭಾರತ–ಶ್ರೀಲಂಕಾ ಸಮಬಲ ಸಾಧಿಸಿವೆ.

ಸಂದೀಪ್‌ ವಾಯಿಯರ್‌ ಇಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಮೊದಲ ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ.

ತಂಡಗಳು:

ಭಾರತ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕವಾಡ್, ದೇವದತ್ತ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಾಹರ್, ಸಂದೀಪ್‌ ವಾರಿಯರ್‌, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ

ಶ್ರೀಲಂಕಾ: ದಸುನ್ ಶನಾಕ (ನಾಯಕ), ಅವಿಷ್ಕಾ ಫರ್ನಾಂಡೊ, ಮಿನೊದ್ ಭಾನುಕಾ (ವಿಕೆಟ್‌ ಕೀಪರ್), ಧನಂಜಯ ಡಿಸಿಲ್ವಾ, ರಮೇಶ್ ಮೆಂಡಿಸ್, ವಾಣಿಂದು ಹಸರಂಗ, ಚಮಿಕಾ ಕರುಣಾರತ್ನೆ, ಅಖಿಲ ಧನಂಜಯ್, ದುಷ್ಮಂತ ಚಾಮಿರಾ, ಸದೀರ ಸಮರವಿಕ್ರಮ, ಪತುಮ್ ನಿಶಾಂಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು