ನವದೆಹಲಿ: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಸೆ. 30 ರಿಂದ ಭಾರತ ಎ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಇತ್ತ ಇರಾನಿ ಕಪ್ಗಾಗಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ರಜತ್ ಪಾಟಿದಾರ್ಗೆ ನಾಯಕತ್ವ ನೀಡಲಾಗಿದೆ.

ಬೆನ್ನಿನ ನೋವಿನ ಕಾರಣದಿಂದಾಗಿ ತಮ್ಮನ್ನು ಮುಂದಿನ 6 ತಿಂಗಳು ರೆಡ್ ಬಾಲ್ ಕ್ರಿಕೆಟ್ಗೆ ಪರಿಗಣಿಸದಂತೆ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಶ್ರೇಯಸ್ ಅಯ್ಯರ್ ಮನವಿ ಮಾಡಿದ್ದರು. ಈ ಕೋರಿಕೆಯ ಬೆನ್ನಲ್ಲೆ ಅವರನ್ನು ಮುಂಬರುವ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಗೆ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ.

ಶ್ರೇಯಸ್ ಅಯ್ಯರ್ ಜೊತೆಗೆ ರವಿ ಬಿಷ್ಣೋಯ್, ವಿಕೆಟ್ ಕೀಪರ್-ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್, ರಿಯಾನ್ ಪರಾಗ್ ಮತ್ತು ಆಯುಷ್ ಬಡೋನಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೂ ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ತಂಡದಲ್ಲಿರುವ ಹರ್ಷಿತ್ ರಾಣಾ ಮತ್ತು ಅರ್ಶ್ದೀಪ್ ಸಿಂಗ್ ಅವರನ್ನು ಅಕ್ಟೋಬರ್ 3 ಮತ್ತು 5 ರಂದು ನಡೆಯಲಿರುವ 2 ಮತ್ತು 3ನೇ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.

ಇರಾನಿ ಕಪ್ಗೆ ಪಾಟಿದಾರ್ ನಾಯಕ

ಇದರ ಜೊತೆಗೆ ಅ. 1 ರಿಂದ ನಾಗ್ಪುರದಲ್ಲಿ ವಿದರ್ಭ ವಿರುದ್ಧ ನಡೆಯಲಿರುವ ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ನಾಯಕರನ್ನಾಗಿ ರಜತ್ ಪಾಟಿದಾರ್ ಅವರನ್ನು ನೇಮಿಸಲಾಗಿದೆ.

ತಂಡಗಳು:

ಮೊದಲ ಏಕದಿನ ಪಂದ್ಯಕ್ಕೆ ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್ (ವಿಕೆ), ರಿಯಾನ್ ಪರಾಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುದ್ವೀರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೋರೆಲ್, ಪ್ರಿಯಾಂಶ್ ಆರ್ಯ, ಸಿಮರ್ಜೀತ್ ಸಿಂಗ್ ಸ್ಥಾನ ಪಡೆದಿದ್ದಾರೆ.

2 ಮತ್ತು 3ನೇ ಏಕದಿನ ಪಂದ್ಯಗಳಿಗೆ ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪ ನಾಯಕ), ಅಭಿಷೇಕ್ ಶರ್ಮಾ, ಪ್ರಭ್ಸಿಮ್ರಾನ್ ಸಿಂಗ್ (ವಿಕೀ), ರಿಯಾನ್ ಪರಾಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುದ್ವೀರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೋರೆಲ್, ಹರ್ಷಿತ್ ರಾಣಾ, ಆರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.

ರೆಸ್ಟ್ ಆಫ್ ಇಂಡಿಯಾ (ಇರಾನಿ ಕಪ್): ರಜತ್ ಪಾಟಿದಾರ್ ( ನಾಯಕ), ಅಭಿಮನ್ಯು ಈಶ್ವರನ್, ಆರ್ಯನ್ ಜುಯಲ್ (ವಿಕೀ), ರುತುರಾಜ್ ಗಾಯಕ್ವಾಡ್ (ಉಪ ನಾಯಕ), ಯಶ್ ಧುಲ್, ಶೇಖ್ ರಶೀದ್, ಇಶಾನ್ ಕಿಶನ್ (ವಿಕೀ), ತನುಷ್ ಕೋಟ್ಯಾನ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಖಲೀಲ್ ಅಹಮದ್, ಆಕಾಶ್ ದೀಪ್, ಅನ್ಶುಲ್ ಕಂಬೋಜ್, ಸರಾಂಶ್ ಜೈನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.