ಬ್ರಿಸ್ಬೇನ್: ಮಧ್ಯಮ ಕ್ರಮಾಂಕದ ಬ್ಯಾಟರ್ ರಾಘವಿ ಬಿಷ್ಟ್ ಹೋರಾಟದ ಆಟವಾಡಿ 93 ರನ್ ಗಳಿಸಿದರೆ, ಕೆಳಕ್ರಮಾಂಕದಲ್ಲಿ ವಿ.ಜೆ.ಜೋಶಿತಾ (51) ಅರ್ಧ ಶತಕ ಬಾರಿಸಿದರು. ಇದರಿಂದ ಭಾರತ ‘ಎ’ ತಂಡ ಏಕೈಕ ‘ಟೆಸ್ಟ್’ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ‘ಎ’ ವಿರುದ್ಧ ಆರಂಭಿಕ ಹಿನ್ನಡೆಯಿಂದ ಚೇತರಿಸಿ 299 ರನ್ಗಳ ಸವಾಲಿನ ಮೊತ್ತ ಗಳಿಸಿತು.

ಭಾರತದ ಬೌಲರ್ಗಳು ನಂತರ ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಕಡಿವಾಣ ಹಾಕಿದರು. ಎರಡನೇ ದಿನದಾಟ ಮುಗಿದಾಗ ಆತಿಥೇಯರು 5 ವಿಕೆಟ್ಗೆ 158 ರನ್ ಗಳಿಸಿದ್ದರು.

ಮೊದಲ ದಿನ ಮಳೆಯಿಂದಾಗಿ ಹೆಚ್ಚಿನ ಅವಧಿಯ ಆಟ ಸಾಧ್ಯವಾಗಿರಲಿಲ್ಲ. 23.2 ಓವರುಗಳ ಆಟ ನಡೆದಿದ್ದು, ಭಾರತ ‘ಎ’ ಆರಂಭಿಕ ಕುಸಿತ ಕಂಡು 5 ವಿಕೆಟ್ಗೆ 93 ರನ್ ಗಳಿಸಿತ್ತು. ಆದರೆ ರಾಘವಿ ಮತ್ತು ಜೋಶಿತಾ ತಂಡದ ಮೊತ್ತ ಉಬ್ಬಲು ನೆರವಾದರು. ರಾಘವಿ 153 ಎಸೆತಗಳನ್ನು ಆಡಿ 16 ಬೌಂಡರಿಗಳನ್ನು ಬಾರಿಸಿದರು. ರಾಧಾ ಯಾದವ್ (33) ಜೊತೆ ಆರನೇ ವಿಕೆಟ್ಗೆ 64 ರನ್ ಸೇರಿಸಿದ ರಾಘವಿ, ನಂತರ ಮಿನ್ನುಮಣಿ ಜೊತೆ 75 ರನ್ ಸೇರಿಸಿದ್ದರಿಂದ ಭಾರತ ಕುಸಿತದಿಂದ ಪಾರಾಯಿತು.

ಜೋಶಿತಾ 72 ಎಸೆತಗಳಲ್ಲಿ 7 ಬೌಂಡರಿಗಳಿದ್ದ 51 ರನ್ ಗಳಿಸಿದರು. ಅವರು ತಿತಾಸ್ ಸಾಧು (23) ಜೊತೆ ಒಂಬತ್ತನೇ ವಿಕೆಟ್ಗೆ ಅಮೂಲ್ಯ 75 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು:

ಭಾರತ ‘ಎ’: 89.1 ಓವರುಗಳಲ್ಲಿ 299 (ರಾಘವಿ ಬಿಷ್ಟ್ 93, ರಾಧಾ ಯಾದವ್ 33, ಮಿನ್ನುಮಣಿ 28, ವಿ.ಜೆ.ಜೋಶಿತಾ 51, ತಿತಾಸ್ ಸಾಧು 23; ಮೈತ್ಲಾನ್ ಬ್ರೌನ್ 65ಕ್ಕೆ3, ಜಾರ್ಜಿಯಾ ಪ್ರೆಸ್ಟ್ವಿಜ್ 37ಕ್ಕೆ3); ಆಸ್ಟ್ರೇಲಿಯಾ ಎ: 43 ಓವರುಗಳಲ್ಲಿ 5ಕ್ಕೆ158 (ತಹಿಲಾ ವಿಲ್ಸನ್ 49, ನಿಕೋಲ್ ಫಾಲ್ಟಮ್ ಬ್ಯಾಟಿಂಗ್ 30, ಸಿಯನ್ನಾ ಜಿಂಜರ್ ಬ್ಯಾಟಿಂಗ್ 24; ಸೈಮಾ ಠಾಕೂರ್ 21ಕ್ಕೆ2, ರಾಧಾ ಯಾದವ್ 40ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.