ಮ್ಯಾಂಚೆಸ್ಟರ್: ತೇವಾಂಶ ಮತ್ತು ಕೊಂಚ ಮಬ್ಬು ಕವಿದ ವಾತಾವರಣವಿರುವ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಗಾಯಳು ಆಟಗಾರರ ಸಮಸ್ಯೆಯನ್ನು ಮೀರಿ ಬಳಗವನ್ನು ಕಣಕ್ಕಿಳಿಸುವ ಸವಾಲು ಭಾರತದ ಮುಂದಿದೆ.

ಆಟಗಾರರಿಗೆ ವೃತ್ತಿಜೀವನದಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯುವ ಕಠಿಣ ಸವಾಲುಗಳನ್ನು ಒಡ್ಡುತ್ತದೆ. ಅದರಲ್ಲೂ ವೇಗದ ಬೌಲರ್ ಮತ್ತು ಆಲ್ರೌಂಡರ್ಗಳು ಗಾಯದ ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಹೆಚ್ಚು. ಸದ್ಯ ನಡೆಯುತ್ತಿರುವ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತವು 1–2 ಯಲ್ಲಿದೆ. ಸರಣಿ ಜಯದ ಕನಸು ಜೀವಂತವಾಗುಳಿಯಬೇಕಾದರೆ, ನಾಲ್ಕನೇ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಆದರೆ ಸೋಮವಾರ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದಾರೆ. ಅವರು ಈ ಪಂದ್ಯದಲ್ಲಿ ಆಡುವುದಿಲ್ಲ. ಲಾರ್ಡ್ಸ್ ಟೆಸ್ಟ್ನಲ್ಲಿ ನಿತೀಶ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಇನ್ನೊಂದೆಡೆ ವೇಗಿ ಆಕಾಶ್ ದೀಪ್ ಕೂಡ ತೊಡೆಸಂಧು ನೋವಿನಿಂದ ಹೊರನಡೆದಿದ್ದಾರೆ. ಇದರಿಂದಾಗಿ ಕೊನೆಪಕ್ಷ ತಂಡದಲ್ಲಿ ಎರಡು ಬದಲಾವಣೆಗಳಂತೂ ಖಚಿತವಾಗಿದೆ.

ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ನಾಯಕ ಶುಭಮನ್ ಗಿಲ್ ಅವರು, ನವಪ್ರತಿಭೆ ಅನ್ಷುಲ್ ಕಂಬೋಜ್ ಅವರು ಆಡುವ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಅನ್ಷುಲ್ ಜೊತೆಗೂಡಬಹುದು ಎಂದಿದ್ದಾರೆ.

ಹರಿಯಾಣದ 24 ವರ್ಷದ ಅನ್ಷುಲ್ ಅವರು ಹೋದ ವರ್ಷದ ರಣಜಿ ಟ್ರೋಫಿ ಪಂದ್ಯದಲ್ಲಿ ಕೇರಳ ವಿರುದ್ಧದ ಒಂದು ಇನಿಂಗ್ಸ್ನಲ್ಲಿ (49ಕ್ಕೆ10) ಮಿಂಚಿದ್ದರು. ಭಾರತ ಎ ತಂಡದಲ್ಲಿ ಆಡಿದ್ದ ಅವರು ಭರವಸೆ ಮೂಡಿಸಿದ್ದರು. ಆದರೆ ಒಂದೊಮ್ಮೆ ಗಿಲ್ ಅವರು ಅನುಭವಿ ಪ್ರಸಿದ್ಧಕೃಷ್ಣ ಅವರ ಆಯ್ಕೆಗೆ ಒತ್ತುಕೊಟ್ಟರೆ ಅನ್ಷುಲ್ ಪದಾರ್ಪಣೆ ಸಾಧ್ಯವಾಗಲಿಕ್ಕಿಲ್ಲ.

ಓಲ್ಡ್ ಟ್ರಾಫರ್ಡ್ನಲ್ಲಿ ಇದುವರೆಗೂ ಭಾರತ ತಂಡವು ಒಂದು ಬಾರಿಯೂ ಟೆಸ್ಟ್ ಪಂದ್ಯ ಗೆದ್ದಿಲ್ಲ. ಇಲ್ಲಿ ಇದುವರೆಗೆ ಉಭಯ ತಂಡಗಳು 9 ಸಲ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡವು ನಾಲ್ಕು ಪಂದ್ಯ ಸೋತಿದೆ. ಐದು ಪಂದ್ಯಗಳು ಡ್ರಾ ಆಗಿವೆ.

ಇಲ್ಲಿಯ ವಾತಾವರಣ ಮತ್ತು ಪಿಚ್ ಸ್ಥಿತಿ–ಗತಿ ಅವಲೋಕಿಸಿದ ನಂತರ, ಆಲ್ರೌಂಡರ್ ಆಯ್ಕೆ ಮಾಡಿಕೊಳ್ಳಲು ಚಿಂತಕರ ಚಾವಡಿ ಮನಸ್ಸು ಮಾಡಿದರೆ ಶಾರ್ದೂಲ್ ಠಾಕೂರ್ ಅವಕಾಶ ಪಡೆಯಬಹುದು. ಇಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ಸಿಗುವುದು ಅನುಮಾನ. ಆದ್ದರಿಂದ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸುವ ಕುರಿತು ಅನುಮಾನವಿದೆ. ಆದರೆ ಅವರು ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಅದೇ ಮೊದಲ ಪಂದ್ಯದಲ್ಲಿ ಶಾರ್ದೂಲ್ ಅವರು ಲಯ ಕಂಡುಕೊಂಡಿರಲಿಲ್ಲ.

ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತ ತಂಡವು ಸರಣಿಯುದ್ದಕ್ಕೂ ಉತ್ತಮವಾಗಿ ಆಡಿದೆ. ಎಜ್ಬಾಸ್ಟನ್ನಲ್ಲಿ ಅಮೋಘ ಜಯ ಸಾಧಿಸಿತ್ತು. ಉಳಿದ ಎರಡೂ ಪಂದ್ಯಗಳಲ್ಲಿಯೂ ಕಠಿಣ ಪೈಪೋಟಿ ಒಡ್ಡಿಯೂ ಸೋತಿತ್ತು. ಆದ್ದರಿಂದ ಪಂದ್ಯದ ಪ್ರಮುಖ ಹಂತಗಳಲ್ಲಿ ಪುಟಿದೇಳುವ ಹಾಗೂ ನಿಯಂತ್ರಣ ಸಾಧಿಸುವ ಪ್ರೌಢಿಮೆಯನ್ನು ಗಿಲ್ ಬಗಳವು ತೋರಬೇಕಿದೆ. ಇನಿಂಗ್ಸ್ ಬೆಳವಣಿಗೆ ಏರುಗತಿಯಲ್ಲಿರುವಾಗಲೇ ಸತತ ವಿಕೆಟ್ಗಳ ಪತನ ಕಾಣುವ, ಫೀಲ್ಡಿಂಗ್ನಲ್ಲಿ ಲೋಪ ಮತ್ತು ಬೌಲರ್ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾಗುವುದನ್ನು ತಪ್ಪಿಸಬೇಕಿದೆ.

ಎಲ್ಲ ಐದು ದಿನಗಳಲ್ಲಿಯೂ ಶಿಸ್ತು, ಏಕಾಗ್ರತೆ ಮತ್ತು ಯೋಜನಾಬದ್ಧ ಆಟವನ್ನು ನಿರಂತರವಾಗಿ ತೋರಬೇಕು. ಆಗಲೇ ಅನುಭವಿ ನಾಯಕ ಬೆನ್ ಸ್ಟೋಕ್ಸ್ ಅವರ ಬಳಗಕ್ಕೆ ತಿರುಗೇಟು ನೀಡಲು ಸಾಧ್ಯ

ಸರಣಿಯಲ್ಲಿ 2–1ರ ಮುನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ ನಿತೀಶ್, ಅರ್ಷದೀಪ್ ಸಿಂಗ್ ಅವರಿಗೆ ಗಾಯ ಬ್ಯಾಟರ್ ಕರುಣ್ ನಾಯರ್ಗೆ ಮತ್ತೊಂದು ಅವಕಾಶದ ನಿರೀಕ್ಷೆ

‘ಕ್ರಿಕೆಟ್ ಸ್ಫೂರ್ತಿ ಕಡೆಗಣಿಸಿದ ಇಂಗ್ಲೆಂಡ್’

ಮ್ಯಾಂಚೆಸ್ಟರ್ (ಎಎಫ್ಪಿ): ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ನ ಮೂರನೇ ದಿನದ ಕೊನೆಯಲ್ಲಿ ಇಂಗ್ಲೆಂಡ್ ಕಾಲಹರಣ ತಂತ್ರ ಅನುಸರಿಸಿ ‘ಕ್ರಿಕೆಟ್ ಸ್ಪೂರ್ತಿ’ಯನ್ನು ನಿರ್ಲಕ್ಷಿಸಿತು ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಮಂಗಳವಾರ ದೂರಿದರು.

ಇಂಗ್ಲೆಂಡ್ನ ಈ ತಂತ್ರ ಉಭಯ ತಂಡಗಳ ನಡುವೆ ಕಾವೇರಿದ ವಾತಾವರಣಕ್ಕೆ ದಾರಿಮಾಡಿಕೊಟ್ಟಿತ್ತು. ನಾಲ್ಕನೇ ದಿನವೂ ಆಗಾಗ ಪರಸ್ಪರರತ್ತ ವಾಗ್ಬಾಣಗಳು ವಿನಿಮಯವಾದವು.

ಇಂಗ್ಲೆಂಡ್ನ 387 ರನ್ಗಳಿಗೆ ಉತ್ತರವಾಗಿ ಮೂರನೇ ದಿನದ ಅಂತ್ಯಕ್ಕೆ ಕೆಲವೇ ನಿಮಿಷ ಮೊದಲು ಭಾರತ ತಂಡ ಕೂಡ ಅಷ್ಟೇ ಮೊತ್ತಕ್ಕೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್ ಎರಡನೇ ಇನಿಂಗ್ಸ್ ಆಡಲು ಏಳು ನಿಮಿಷಗಳಿದ್ದವು. ಆದರೆ ಭಾರತ ಎರಡನೇ ಓವರ್ ಮಾಡದಂತೆ ಜಾಕ್ ಕ್ರಾಲಿ ಕಾಲಹರಣ ಮಾಡಿದ್ದರು. ಎರಡು ಸಲ ಕೊನೆಗಳಿಗೆಯಲ್ಲಿ ಸ್ಟ್ಯಾನ್ಸ್ ಬದಲಿಸಿದ್ದರು. ಒಮ್ಮೆ ಚೆಂಡು ಗ್ಲೋವ್ಗೆ ಸವರಿದರೂ, ಫಿಸಿಯೊರನ್ನು ಕರೆಸಿದ್ದರು. ಹೀಗಾಗಿ ಎರಡನೇ ಓವರ್ಗೆ ಅವಕಾಶ ವಾಗಲಿಲ್ಲ. ಗಿಲ್ ಅವರು ಕ್ರಾಲಿ ಅವರನ್ನು ದುರುಗುಟ್ಟಿಸಿ ನೋಡಿ ಬೈದಿದ್ದರು.

ನಾಲ್ಕನೇ ಟೆಸ್ಟ್ಗೆ ಮುನ್ನಾದಿನವಾದ ಮಂಗಳವಾರ ಈ ಬಗ್ಗೆ ಗಿಲ್ ಸ್ಪಷ್ಟನೆ ನೀಡಿದರು. ಇಂಗ್ಲೆಂಡ್ ಆಡಲು ಇಳಿಯುವಾಗ ಏಳು ನಿಮಿಷಗಳು ಉಳಿದಿದ್ದವು. ಆದರೆ ಕ್ರೀಸಿಗೆ ಬರಲು 10, 20 ಸೆಕೆಂಡು ಅಲ್ಲ, 90 ಸೆಕೆಂಡು ತೆಗೆದುಕೊಂಡಿದ್ದು ಗಿಲ್ ಸಿಡಿಮಿಡಿಗೆ ಕಾರಣವಾಯಿತು. ‘ನಿಜ, ಹಲವು ತಂಡಗಳು ಈ ರೀತಿ (ಕಾಲಹರಣ) ಮಾಡುತ್ತವೆ. ನಾವೂ ಆ ಸ್ಥಿತಿಯಲ್ಲಿದ್ದರೆ ಕಡಿಮೆ ಓವರ್ ಆಡುತ್ತಿದ್ದೆವು. ಆದರೆ ಅದಕ್ಕೂ ಒಂದು ಮಿತಿಯಿದೆ’ ಎಂದರು.

ಇಷ್ಟೊಂದು ತಡವಾಗಿ ಕ್ರೀಸಿಗೆ ಬಂದಿದ್ದು ಸಹ ಕ್ರೀಡಾ ಸ್ಫೂರ್ತಿಯ ನಡವಳಿಕೆಯಲ್ಲ ಎಂದು ಹೇಳಿದರು.

‘ನಾನು ಕ್ರಾಲಿ ಅವರಿಗೆ ನಿಂದಿಸಿದ್ದನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕಾವೇರಿದ ಆ ಕ್ಷಣದಲ್ಲಿ ಹಾಗೆ ಹೇಳಿಹೋಯಿತು’ ಎಂದು ಗಿಲ್ ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.