ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ರಿಷಬ್ ಪಂತ್ ಅರ್ಧ ಶತಕ - ಗೆಲುವಿಗಾಗಿ ಭಾರತ ಹೋರಾಟ

Last Updated 19 ಜನವರಿ 2021, 7:08 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಅಂತಿಮ ಅವಧಿಯಲ್ಲಿ ಫಲಿತಾಂಶ ಸಿಗುವ ಆಶಯ ಮೂಡಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ ಸಂಘಟಿಸುತ್ತಿದ್ದಾರೆ.

ಶುಭಮನ್ ಗಿಲ್(91), ನಾಯಕ ಅಜಿಂಕ್ಯ ರಹಾನೆ(24), ಚೇತೇಶ್ವರ್ ಪೂಜಾರ (56) ಔಟಾದ ಬಳಿಕ ರಿಷಬ್ ಪಂತ್ ಅರ್ಧ ಶತಕ ಸಿಡಿಸಿರನ್ ಗತಿ ಏರಿಸುತ್ತಿದ್ದಾರೆ. ಆದರೆ, ಬ್ರಿಸ್ಬೆನ್‌ನಲ್ಲಿ ಮಳೆ ಸಾಧ್ಯತೆ ಇರುವುದರಿಂದ ಅಂತಿಮ ಹಂತದಲ್ಲಿ ಏನಾಗುತ್ತೋ ಎಂಬ ಆತಂಕಎದುರಾಗಿದೆ.

ಚಹಾ ವಿರಾಮದ ಬಳಿಕ ಭಾರತದ ಗೆಲುವಿಗೆ100ಕ್ಕೂ ಅಧಿಕ ರನ್ ಬೇಕಾಗಿತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಗೆಲುವಿನ ಆಶಯ ಮೂಡಿಸಿದ್ದಾರೆ. 9 ನ್ ಗಳಿಸಿ ಮಯಂಕ್ ಅಗರ್ವಾಲ್ ನಿರ್ಗಮಿಸಿದ್ದಾರೆ.ಮಯಂಕ್ ಔಟಾದಾಗ ಭಾರತ 5 ವಿಕೆಟ್ ನಷ್ಟಕ್ಕೆ ‌265 ರನ್ ಗಳಿಸಿತ್ತು.

ಇಂದು ಆರಂಭದಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಚೇತರಿಸಿಕೊಂಡ ಭಾರತ ಉತ್ತಮವಾಗಿ ಕಮ್ ಬ್ಯಾಕ್ ಮಾಡಿತು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಅಮೋಘ 91 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ರಹಾನೆ 22 ಎಸೆತಗಳಲ್ಲಿ 24 ರನ್ ಸಿಡಿಸಿ ಔಟಾದರು.

ಒಂದೊಮ್ಮೆ,ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಟ್ರೋಫಿ ಭಾರತದ ಬಳಿಯೇ ಉಳಿದುಕೊಳ್ಳಲಿದೆ. ಏಕೆಂದರೆ, ಭಾರತ ಕಳೆದ ಬಾರಿ ಬಾರ್ಡರ್–ಗವಾಸ್ಕರ್ ಟ್ರೋಫಿ ಗೆದ್ದಿತ್ತು. ಭಾರತ ಗೆದ್ದರೆ 2–1 ಅಂತರದಿಂದ ಸರಣಿ ಗೆದ್ದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT