ಮಂಗಳವಾರ, ಮೇ 24, 2022
27 °C

IND vs ENG | ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌: ಎರಡನೇ ಸ್ಥಾನಕ್ಕೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮಂಗಳವಾರ ಇಂಗ್ಲೆಂಡ್ ಎದುರು ಜಯಿಸಿದ ನಂತರ ವಿರಾಟ್ ಕೊಹ್ಲಿ ಬಳಗವು ಡಬ್ಲುಟಿಸಿ ಫೈನಲ್‌ಗೆ ಮತ್ತಷ್ಟು ಸನಿಹ ಸಾಗಿದೆ. ಶೇಕಡಾವಾರು ಪಾಯಿಂಟ್ಸ್‌ (ಪಿಸಿಟಿ)ನಲ್ಲಿ ಭಾರತವು 69.7 ಅಂಕ ಗಳಿಸಿದೆ. ಒಟ್ಟು 460 ಅಂಕಗಳು ಖಾತೆಯಲ್ಲಿವೆ.

ಶೇ 70 ಪಿಸಿಟಿ ಇರುವ ನ್ಯೂಜಿಲೆಂಡ್ ಈಗಾಗಲೇ ಫೈನಲ್ ಅರ್ಹತೆ ಗಿಟ್ಟಿಸಿದೆ. ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿ ಜಯಿಸಬೇಕು. ಯಾವ ಪಂದ್ಯವನ್ನೂ ಸೋಲಬಾರದು. ಆಗ ಫೈನಲ್ ದಾರಿಯು ಸುಗಮವಾಗುತ್ತದೆ.

ಚೆನ್ನೈನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. ಆಗ ಎರಡನೇ ಸ್ಥಾನಕ್ಕೆ ಜಿಗಿದಿದ್ದ ಇಂಗ್ಲೆಂಡ್ (ಶೇ 67.0) ಮತ್ತೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ  (69.2) ಮೂರನೇ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು