ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS ಮೊದಲ ಪಂದ್ಯ | ಆಸ್ಟ್ರೇಲಿಯಾ ವಿರುದ್ಧ ಸಾವಿರ ರನ್ ಪೂರೈಸಿದ ಧವನ್

ಏಕದಿನ ಸರಣಿ
Last Updated 14 ಜನವರಿ 2020, 12:30 IST
ಅಕ್ಷರ ಗಾತ್ರ

ಮುಂಬೈ: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಪೂರೈಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿದರು.

ಉಭಯ ದೇಶಗಳ ನಡುವಣ ಮೂರು ಪಂದ್ಯಗಳ ಮೊದಲ ಏಕದಿನ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಧವನ್‌ 74 ರನ್‌ ಗಳಿಸಿಕೊಂಡರು. ಇದರೊಂದಿಗೆ ಈ ತಂಡದವಿರುದ್ಧ ಇದುವರೆಗೆ ಒಟ್ಟು25 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಧವನ್‌ 1,049 ರನ್‌ ಗಳಿಸಿದ್ದಾರೆ.

ಇದಕ್ಕೂ ಮೊದಲು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಹಾಗೂ ಮಹೇಂದ್ರ ಸಿಂಗ್‌ ಧೋನಿ, ಈ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾ ಎದುರು ಒಟ್ಟು 71 ಪಂದ್ಯಗಳ 70 ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿರುವ ಸಚಿನ್‌ ಬರೋಬ್ಬರಿ 3077 ರನ್‌ ಕಲೆಹಾಕಿದ್ದಾರೆ. 38 ಇನಿಂಗ್ಸ್‌ ಆಡಿರುವ ರೋಹಿತ್‌ 2047 ರನ್‌ ಗಳಿಸಿದ್ದಾರೆ. 36ಇನಿಂಗ್ಸ್‌ಗಳಿಂದ ಕೊಹ್ಲಿ 1743 ರನ್ ಪೇರಿಸಿದ್ದಾರೆ. ಉಳಿದಂತೆ ಧೋನಿ 55 ಪಂದ್ಯಗಳ 48 ಇನಿಂಗ್ಸ್‌ನಿಂದ ಒಟ್ಟು 1660 ರನ್‌ ಗಳಿಸಿಕೊಂಡಿದ್ದಾರೆ.

ಇಂದು ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 49.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 255 ರನ್‌ ಗಳಿಸಿದೆ. ಗುರಿ ಬೆನ್ನತ್ತಿರುವ ಆಸಿಸ್‌ ಮೂರು ಓವರ್‌ಗಳ ಅಂತ್ಯಕ್ಕೆವಿಕೆಟ್‌ ನಷ್ಟವಿಲ್ಲದೆ 14 ರನ್ ಗಳಿಸಿದೆ. ಡೇವಿಡ್‌ ವಾರ್ನರ್‌ (2) ಮತ್ತು ನಾಯಕ ಆ್ಯರನ್‌ ಫಿಂಚ್‌(11) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT