ನೋವಿನಲ್ಲಿ ಸಿರಾಜ್ ಬೌಲಿಂಗ್: ಬೂಮ್ರಾ
ಮೊಹಮ್ಮದ್ ಸಿರಾಜ್ ಅವರ ಸ್ನಾಯುಸೆಳೆತದ ನೋವಿನಲ್ಲಿಯೂ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಉತ್ಸಾಹ ಮತ್ತು ಉತ್ತಮ ಬೌಲಿಂಗ್ ತಮಗೆ ಇಷ್ಟವಾಯಿತು ಎಂದು ಭಾರತ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಹೇಳಿದರು. ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಿರಾಜ್ ಅವರಲ್ಲಿರುವ ಹೋರಾಟ ಮನೋಭಾವವು ಸ್ಫೂರ್ತಿದಾಯಕ. ತಮ್ಮ ಈ ಗುಣದಿಂದಲಾಗಿ ಅವರು ತಂಡದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದಾರೆ’ ಎಂದರು.