ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG: ಭಾರತ ಪರ ಚಾಹಲ್‌ ಸಾಧನೆ, ಇಂಗ್ಲೆಂಡ್‌ನ ಟೋಪ್ಲಿ ವಿಶ್ವದಾಖಲೆ

ಅಕ್ಷರ ಗಾತ್ರ

ಲಂಡನ್‌: ಭಾರತ ತಂಡದ ವಿರುದ್ಧಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ ಪಡೆ 100 ರನ್‌ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1 ಅಂತರದಿಂದ ಸಮಬಲ ಸಾಧಿಸಿದೆ.

ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್‌ ಮಾಡಿದ ಭಾರತದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ಇಂಗ್ಲೆಂಡ್‌ನ ವೇಗಿ ರೀಸ್‌ ಟೋಪ್ಲಿ ಲಾರ್ಡ್ಸ್‌ ಅಂಗಳದಲ್ಲಿ ತಮ್ಮ ಹೆಸರಿಗೆ ಒಂದೊಂದು ದಾಖಲೆ ಬರೆದುಕೊಂಡರು.

ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 49 ಓವರ್‌ಗಳಲ್ಲಿ 246ರನ್‌ ಗಳಿಸಿ ಆಲೌಟ್‌ ಆಯಿತು. ಭಾರತ ಪರ ಲಾರ್ಡ್ಸ್ ಅಂಗಳದಲ್ಲಿ ಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿದ ಯಜುವೇಂದ್ರ ಚಾಹಲ್, ಆತಿಥೇಯ ಬ್ಯಾಟಿಂಗ್‌ಗೆ ಬಲವಾದ ಪೆಟ್ಟು ಕೊಟ್ಟರು.

ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 146 ರನ್‌ ಗಳಿಸಿ ಸರ್ವಪತನ ಕಂಡಿತು. ನಾಯಕ ರೋಹಿತ್‌ ಶರ್ಮಾ ಹತ್ತು ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲಿಲ್ಲ. ಯಾವೊಬ್ಬ ಬ್ಯಾಟರ್‌ ಸಹ 30ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ. ಹೀಗಾಗಿ ಹೀನಾಯವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ ನಡೆಯಲಿದೆ.

ಭಾರತ ಪರ ಚಾಹಲ್‌ ಸಾಧನೆ;ಟೋಪ್ಲಿ ವಿಶ್ವದಾಖಲೆ
10 ಓವರ್‌ ಬೌಲಿಂಗ್ ಮಾಡಿದಯಜುವೇಂದ್ರ ಚಾಹಲ್ 47 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಪಡೆದರು. ಈ ಮೊದಲು ಇಲ್ಲಿ (ಲಾರ್ಡ್ಸ್‌) ಭಾರತ ಪರ ಯಾವುದೇ ಬೌಲರ್‌ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ವಿಕೆಟ್‌ ಉರುಳಿಸಿರಲಿಲ್ಲ. 1983ರಲ್ಲಿ ಮೋಹಿಂದರ್‌ ಅಮರನಾಥ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ 12 ರನ್‌ ನೀಡಿ 3 ವಿಕೆಟ್‌ ಪಡೆದಿದ್ದದ್ದೇ ಇಲ್ಲಿವರೆಗೆ ದಾಖಲೆಯಾಗಿತ್ತು.

ಇತ್ತಇಂಗ್ಲೆಂಡ್‌ನ ರೀಸ್‌ ಟೋಪ್ಲಿ ಲಾರ್ಡ್ಸ್‌ನಲ್ಲಿ ವಿಶ್ವದಾಖಲೆಯನ್ನೇ ಬರೆದರು. 9.5 ಓವರ್‌ ಎಸೆದ ಅವರು ಕೇವಲ 24 ರನ್‌ ನೀಡಿ ಭಾರತದ ಪ್ರಮುಖ ಆರು ವಿಕೆಟ್ ಕಬಳಿಸಿದರು. ಇದರೊಂದಿಗೆ ಅವರು ಪಾಕಿಸ್ತಾನದ ಶಾಹೀನ್‌ ಅಫ್ರಿದಿ ದಾಖಲೆಯನ್ನು ಮುರಿದರು.

ಅಫ್ರಿದಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ 35 ರನ್‌ಗೆ 6 ವಿಕೆಟ್ ಪಡೆದು ಲಾರ್ಡ್ಸ್‌ನಲ್ಲಿ 'ಶ್ರೇಷ್ಠ ಬೌಲಿಂಗ್‌' ಸಾಧನೆ ಮಾಡಿದ್ದರು. ಇದೀಗಟೋಪ್ಲಿ ಆ ದಾಖಲೆಯನ್ನು ಹಿಂದಿಕ್ಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT