ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು

Last Updated 12 ಮಾರ್ಚ್ 2020, 12:21 IST
ಅಕ್ಷರ ಗಾತ್ರ
ADVERTISEMENT
""

ಧರ್ಮಶಾಲಾ:ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ಆಯೋಜನೆಯಾಗಿದ್ದ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯ ರದ್ದಾಗಿದೆ.

ನಿಗದಿಯಂತೆ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ, ಮಳೆ ಮತ್ತೆಮತ್ತೆ ಸುರಿದ ಕಾರಣಟಾಸ್‌ ಆರಿಸಲೂ ಸಾಧ್ಯವಾಗಲಿಲ್ಲ.ಹೀಗಾಗಿ ಪಂದ್ಯವನ್ನು ರದ್ದು ಮಾಡಲಾಯಿತು.

ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿ ಆಡುವ ಸಲುವಾಗಿ ಭಾರತ ಪ್ರವಾಸ ಕೈಗೊಂಡಿದೆ. ಎರಡು ಮತ್ತು ಮೂರನೇ ಪಂದ್ಯಗಳುಕ್ರಮವಾಗಿ ಲಖನೌ(ಮಾ.15) ಹಾಗೂ ಕೋಲ್ಕತ್ತದಲ್ಲಿ (ಮಾ.18)ನಡೆಯಲಿವೆ.

ಪಾಂಡ್ಯ ‘ಕಮ್‌ಬ್ಯಾಕ್‌’
ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಕಳೆದಏಳು ತಿಂಗಳಿಂದ ತಂಡದಿಂದ ದೂರ ಉಳಿದಿದ್ದಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದರು.ಆದರೆ, ಅದಕ್ಕೆ ಮಳೆ ಅವಕಾಶ ನೀಡಲಿಲ್ಲ.ನಾಲ್ಕು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಪಾಂಡ್ಯ2019ರಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ್ದು ಕೊನೆಯ ಪಂದ್ಯ. ಇದೀಗ ಅವರು ಮರಳಿರುವುದರಿಂದ ತಂಡದ ಬಲ ಹೆಚ್ಚಿದೆ. ಈಚೆಗೆ ಡಿ.ವೈ. ಪಾಟೀಲ್ ಕಾರ್ಪೊರೇಟ್‌ಕಪ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮತ್ತು ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಅದರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ತಂಡಗಳು:ಭಾರತ:ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಭಮನ್ ಗಿಲ್.

ದಕ್ಷಿಣ ಆಫ್ರಿಕಾ:ಕ್ವಿಂಟನ್ ಡಿ ಕಾಕ್ (ನಾಯಕ), ತೆಂಬಾ ಬವುಮಾ, ರಾಸಿ ವ್ಯಾನ್ ಡರ್ ಡಸ್ಸೆ, ಫಾಫ್ ಡು ಪ್ಲೆಸಿ, ಕೈಲ್ ವೆರ್ರೇನ್, ಹೆನ್ರಿಚ್ ಕ್ಲಾಸೆನ್, ಜೇನ್ಮನ್ ಮಲಾನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್‌, ಆ್ಯಂಡಿಲ್ ಪಿಶುವಾಯೊ, ಲುಂಗಿ ಗಿಡಿ, ಲುಥೊ ಸಿಪಾಮ್ಲಾ, ಬೇರನ್ ಹೆನ್ರಿಕ್ಸ್‌, ಎನ್ರಿಚ್ ನೊರ್ಟೆ, ಜಾರ್ಜ್ ಲಿಂಡ್, ಕೇಶವ್ ಮಹಾರಾಜ್.

ಕೊರೊನಾ ಭೀತಿ: ಆಟಗಾರರಿಗೆ ಸೂಚನೆ
‘ಹೊರಗಡೆ ತಿಂಡಿಯನ್ನು ತಿನ್ನಬೇಡಿ, ಸೆಲ್ಫಿ ತೆಗೆದುಕೊಳ್ಳಲು ಬೇರೆಯವರ ಮೊಬೈಲ್‌ ಫೋನ್‌ಗಳನ್ನು ಮುಟ್ಟಬೇಡಿ, ಅಪರಿಚಿತರೊಂದಿಗೆ ಸಾಮೀಪ್ಯ ಬೇಡ..’

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೈದ್ಯಕೀಯ ತಂಡವು ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ತಂಡದ ಆಟಗಾರರಿಗೆ ಈ ರೀತಿಯ ಸೂಚನೆಗಳನ್ನು ನೀಡಿದೆ.

ಚೆಂಡು ಹೊಳಪಿಗೆ ಎಂಜಲು ಬಳಕೆಯಿಲ್ಲ!
ಬಿಳಿಚೆಂಡಿನ ಹೊಳಪು ಹೆಚ್ಚಿಸಲು ಬೌಲರ್‌ಗಳು ತಮ್ಮ ಎಂಜಲು ಬಳಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಇದೀಗ ಕೊರೊನಾ ವೈರಸ್‌ ಪರಿಣಾಮ ಈ ಹಳೆಯ ಪದ್ಧತಿಯನ್ನು ಕೈಬಿಡಲು ಭಾರತ ತಂಡವು ಹೆಜ್ಜೆ ಇಟ್ಟಿದೆ.

‘ಎಂಜಲು ಬಳಸದಿರಲು ಯೋಚಿಸಿದ್ದೇವೆ. ಆದರೆ, ಅದಿಲ್ಲದೇ ಚೆಂಡಿನ ಹೊಳಪು ಹೆಚ್ಚಿಸುವುದು ಹೇಗೆ? ಹಾಗೊಮ್ಮೆ ಮಾಡದಿದ್ದರೆ ಬ್ಯಾಟ್ಸ್‌ಮನ್‌ಗಳು ನಮ್ಮನ್ನು ದಂಡಿಸುವುದು ಖಚಿತ. ಆಗ ನಾವು ಚೆನ್ನಾಗಿ ಬೌಲಿಂಗ್ ಮಾಡಿಲ್ಲವೆಂದು ನೀವೇ ಟೀಕಿಸುತ್ತೀರಿ. ತಂಡದ ಸಭೆಯಲ್ಲಿ ಈ ಕುರಿತು ನಿರ್ಧರಿಸುತ್ತೇವೆ’ ಎಂದು ಭಾರತದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT