ಗುರುವಾರ , ಜನವರಿ 30, 2020
20 °C
ಚುಟುಕು ಕ್ರಿಕೆಟ್ ಸರಣಿ

IND vs SL 2ನೇ ಟಿ20 ಪಂದ್ಯ: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್‌: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಗುವಾಹಟಿಯಲ್ಲಿ ಆಯೋಜನೆಯಾಗಿದ್ದ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹಾಗಾಗಿ ಇಲ್ಲಿನ ಹೋಳ್ಕರ್‌ ಆಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ಇನಿಂಗ್ಸ್‌ ಮುನ್ನಡೆ ಸಾಧಿಸುವ ಯೋಜನೆಯೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿವೆ.

ಸದ್ಯ ಎರಡು ಓವರ್‌ ಮುಕ್ತಾಯವಾಗಿದ್ದು ಲಂಕಾ ಪಡೆ ವಿಕೆಟ್‌ ನಷ್ಟವಿಲ್ಲದೆ 12 ರನ್‌ ಗಳಿಸಿದೆ. ಧನುಷ್ಕಾ ಗುಣತಿಲಕ (0) ಹಾಗೂ ಆವಿಷ್ಕ ಫರ್ನಾಂಡೊ (9) ಕ್ರೀಸ್‌ನಲ್ಲಿದ್ದಾರೆ.

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಕೆ.ಎಲ್‌.ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್‌, ವಾಷಿಂಗ್ಟನ್ ಸುಂದರ್‌

ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕ ಫರ್ನಾಂಡೊ, ದಾಸುನ್ ಶನಕ, ಕುಶಾಲ್ ಪೆರೇರ, ಧನಂಜಯ ಡಿಸಿಲ್ವ, ಇಸುರು ಉಡಾನ, ಭಾನುಕ ರಾಜಪಕ್ಸ, ಒಶಾಡ ಫರ್ನಾಂಡೊ, ವನಿಂದು ಹಸರಂಗ, ಲಾಹಿರು ಕುಮಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು