ಏಕದಿನ ಕ್ರಿಕೆಟ್‌: ಬ್ಯಾಟಿಂಗ್‌ ಆರಂಭಿಸಿದ ವಿಂಡೀಸ್‌ಗೆ ಆರಂಭಿಕ ಆಘಾತ

7

ಏಕದಿನ ಕ್ರಿಕೆಟ್‌: ಬ್ಯಾಟಿಂಗ್‌ ಆರಂಭಿಸಿದ ವಿಂಡೀಸ್‌ಗೆ ಆರಂಭಿಕ ಆಘಾತ

Published:
Updated:

ತಿರುವನಂತಪುರ: ಇಲ್ಲಿನ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ ಭಾರತ – ವೆಸ್ಟ್‌ ಇಂಡೀಸ್‌ ಐದನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ಹೋರಾಟ ನಡೆಸುತ್ತಿವೆ.

ಭಾರತದ ವಿರುದ್ಧ ಟಾಸ್‌ ಗೆದ್ದಿರುವ ವೆಸ್ಟ್‌ ಇಂಡೀಸ್‌ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದೆ.

ಭುವನೇಶ್ವರ್‌ ಕುಮಾರ್‌ ಎಸೆದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಕೀರನ್‌ ಪೋವೆಲ್‌ ವಿಕೆಟ್‌ ಒಪ್ಪಿಸಿದರು.

ಜಸ್‌ಪ್ರೀತ್‌ ಬೂಮ್ರಾ ಎಸೆದ ಎರಡನೇ ಓವರ್‌ನಲ್ಲಿ ಶಾಯ್‌ ಹೋಪ್‌ ಔಟಾಗಿದ್ದಾರೆ.

ಸದ್ಯ ಆಟ ಮುಂದುವರಿಸಿರುವ ವಿಂಡೀಸ್‌ 4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ನಾಲ್ಕು ರನ್‌ ಗಳಿಸಿದೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರ ಮುನ್ನಡೆ ಸಾಧಿಸಿದೆ. ಆದ್ದರಿಂದ ಇಲ್ಲಿ ಗೆದ್ದರೆ ಮಾತ್ರ ಸರಣಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ವೆಸ್ಟ್ ಇಂಡೀಸ್‌ಗೆ ಸರಣಿಯಲ್ಲಿ ಸಮಬಲ ಸಾಧಿಸಲು ಗೆಲುವು ಅನಿವಾರ್ಯ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !