ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ವೆಸ್ಟ್‌ ಇಂಡೀಸ್‌ ಟೆಸ್ಟ್‌ ಕ್ರಿಕೆಟ್‌: ವಿರಾಟ್‌ ಪಡೆಗೆ ಇನಿಂಗ್ಸ್‌ ಗೆಲುವು

Last Updated 6 ಅಕ್ಟೋಬರ್ 2018, 14:12 IST
ಅಕ್ಷರ ಗಾತ್ರ

ರಾಜ್‌ಕೋಟ್‌:ಆತಿಥೇಯ ಭಾರತ ಕಲೆಹಾಕಿದ್ದ ಬೃಹತ್‌ ಮೊತ್ತದೆದುರು ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದು ಭಾರಿ ಹಿನ್ನಡೆ ಅನುಭವಿಸಿದ್ದ ವೆಸ್ಟ್‌ ಇಂಡೀಸ್‌, ಎರಡನೇ ಇನಿಂಗ್ಸ್‌ನಲ್ಲೂ ವೈಫಲ್ಯ ಮುಂದುವರಿಸಿತು. ಇದರಿಂದಾಗಿ ವಿರಾಟ್‌ ಕೊಹ್ಲಿ ಪಡೆ ಇನಿಂಗ್ಸ್‌ ಹಾಗೂ 272 ರನ್‌ ಅಂತರದ ಸುಲಭ ಗೆಲುವಿನ ಸಂಭ್ರಮ ಆಚರಿಸಿತು.

ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ, ಆರಂಭಿಕ ಆಟಗಾರ ಪೃಥ್ವಿ ಶಾ(134), ನಾಯಕ ವಿರಾಟ್‌ ಕೊಹ್ಲಿ(139) ಹಾಗೂ ಆಲ್ರೌಂಡರ್‌ ರವೀಂದ್ರ ಜಡೇಜಾ(100) ಅವರ ಶತಕಗಳ ನೆರವಿನಿಂದ149.5 ಓವರ್‌ಗಳಲ್ಲಿ 649 ರನ್‌ ಗಳಿಸಿಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು.

ಗುರಿ ಬೆನ್ನತ್ತಿದಪ್ರವಾಸಿ ಪಡೆ ಮೊದಲ ಇನಿಂಗ್ಸ್‌ನಲ್ಲಿ 181 ರನ್‌ಗಳಿಸಿ ಆಲೌಟ್‌ ಆಗಿತ್ತು. 468 ರನ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕ್ರೇಗ್‌ ಬ್ರಾಥ್‌ವೇಟ್‌ ಬಳಗ ಮತ್ತೆ ಮುಗ್ಗರಿಸಿತು.

ಉತ್ತಮವಾಗಿ ಬೌಲಿಂಗ್‌ ಮಾಡಿದ ಆತಿಥೇಯ ಸ್ಪಿನ್ನರ್‌ಗಳು ಕೆರಿಬಿಯನ್ನರನ್ನು 196ರನ್‌ಗಳಿಗೆ ನಿಯಂತ್ರಿಸಿದರು. ಆರಂಭಿಕ ಕೀರನ್‌ ಪೊವೆಲ್‌(83) ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.

ಭಾರತ ಪರ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ 2, ರವೀಂದ್ರ ಜಡೇಜಾ 3 ಹಾಗೂ ಕುಲದೀಪ್‌ ಯಾದವ್‌ 5 ವಿಕೆಟ್‌ ಪಡೆದು ಮಿಂಚಿದರು. ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಪೃಥ್ವಿ ಶಾ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌: 649/9
ಪೃಥ್ವಿ ಶಾ 134, ವಿರಾಟ್‌ ಕೊಹ್ಲಿ 139,ರವೀಂದ್ರ ಜಡೇಜಾ 100, ರಿಷಭ್‌ ಪಂತ್‌ 92, ಚೇತೇಶ್ವರ ಪೂಜಾರ 86
ದೇವೇಂದ್ರ ಬಿಷೂ 4 ವಿಕೆಟ್‌, ಶೆರ್ಮನ್‌ ಲೂಯಿಸ್‌ 2 ವಿಕೆಟ್‌

ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌: 181/10

ರೋಸ್ಟನ್‌ ಚೇಸ್‌ 53, ಕೀಮೋ ಪೌಲ್‌ 47
ರವಿಚಂದ್ರನ್‌ ಅಶ್ವಿನ್‌ 4 ವಿಕೆಟ್‌, ಮೊಹಮ್ಮದ್‌ ಶಮಿ 2 ವಿಕೆಟ್‌, ಉಮೇಶ್‌ ಯಾದವ್‌ 1 ವಿಕೆಟ್‌,ರವೀಂದ್ರ ಜಡೇಜಾ 1, ಕುಲದೀಪ್‌ ಯಾದವ್‌ 1 ವಿಕೆಟ್‌

ವೆಸ್ಟ್‌ ಇಂಡೀಸ್‌ ಎರಡನೇಇನಿಂಗ್ಸ್‌: 196/10

ಕೀರನ್‌ ಪೋವೆಲ್‌ 83, ರೋಸ್ಟನ್‌ ಚೇಸ್‌ 20
ಲದೀಪ್‌ ಯಾದವ್‌ 5 ವಿಕೆಟ್‌,ರವೀಂದ್ರ ಜಡೇಜಾ 3 ವಿಕೆಟ್‌,ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT