ನವದೆಹಲಿ: ರೋಜರ್ ಫೆಡರರ್ ಮತ್ತು ಆ್ಯಂಡಿ ರಾಡಿಕ್ ಅವರು ಗ್ರ್ಯಾನ್ಸ್ಲಾಮ್ ಟೆನಿಸ್ ಪಂದ್ಯಗಳಲ್ಲಿ ಅಥವಾ ಫೈನಲ್ನಲ್ಲಿ ಮುಖಾಮುಖಿಯಾದಾಗಲೆಲ್ಲ ಫಲಿತಾಂಶ ನಿರೀಕ್ಷಿತವೇ ಆಗಿರುತ್ತಿತ್ತು. ಸ್ವಿಟ್ಜರ್ಲೆಂಡ್ನ ಫೆಡರರ್ ಅವರು ಅಮೆರಿಕದ ಆ್ಯಂಡಿಯನ್ನು ಎದುರಿಸಿದ ಎಂಟು ಪಂದ್ಯಗಳು ಮತ್ತು ಮೂರು ಫೈನಲ್ಗಳಲ್ಲಿ ಪಾರಮ್ಯ ಮೆರೆದವರು. ಟೆನಿಸ್ ಅಂಗಣದಲ್ಲಿ ಇಂತಹ ಹಲವು ಉದಾಹರಣೆಗಳು ಗಮನಸೆಳೆಯುತ್ತವೆ.

ಕ್ರಿಕೆಟ್ನಲ್ಲಿ ಭಾರತ ತಂಡವು ಅಂತಹ ಪ್ರಾಬಲ್ಯವನ್ನು ಪಾಕಿಸ್ತಾನ ತಂಡದ ಎದುರು ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಹೊಂದಿದೆ. ಏಕದಿನ ಮತ್ತು ಟಿ20 ವಿಶ್ವಕಪ್ಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದೇ ಹೆಚ್ಚು. ಇನ್ನು ಟೆಸ್ಟ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ್ದು ‘ಅಧಿಕಾರಯುತ’ ಜಯದ ಓಟ ನಿರಂತರವಾಗಿದೆ.

2002ರಲ್ಲಿ ಜಮೈಕಾದ ಸಬೀನಾ ಪಾರ್ಕ್ನಲ್ಲಿ ವಿಂಡೀಸ್ ಟೆಸ್ಟ್ ಜಯಿಸಿತ್ತು. ಅದರ ನಂತರ 26 ಟೆಸ್ಟ್ಗಳಲ್ಲಿ ಭಾರತ 16 ಜಯಿಸಿದೆ. ಉಳಿದವು ಡ್ರಾ ಆಗಿವೆ. ಭಾರತದ ನೆಲದಲ್ಲಿ ವಿಂಡೀಸ್ ನಿರಾಶೆ ಇನ್ನೂ ಆಳವಾಗಿದೆ. 1994ರಲ್ಲಿ ವಿಂಡೀಸ್ ಭಾರತದಲ್ಲಿ ಗೆದ್ದಿದ್ದು ಕೊನೆಯದು. ಅಲ್ಲಿಂದ ಇಲ್ಲಿಯವರೆಗೂ ಭಾರತದ ನೆಲದಲ್ಲಿ ಕೆರಿಬಿಯನ್ ಪಡೆ ಜಯದ ಮುಖವನ್ನೇ ನೋಡಿಲ್ಲ.

ಶುಕ್ರವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ವಿಂಡೀಸ್ ಎದುರು ಮೂರು ದಿನಗಳಲ್ಲಿಯೇ ಜಯಿಸುವುದೇ ಎಂಬ ಕುತೂಹಲವಷ್ಟೇ ಈಗ ಉಳಿದಿದೆ. ಏಕೆಂದರೆ; ಅಹಮದಾಬಾದಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು 140 ರನ್ಗಳಿಂದ ಗೆದ್ದಿತ್ತು. ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತ್ತು.

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಸರಣಿ ಆಡಲಿರುವ ಭಾರತ ತಂಡಕ್ಕೆ ವಿಂಡೀಸ್ ಎದುರಿನ ಪಂದ್ಯಗಳು ಪೂರ್ವಾಭ್ಯಾಸದ ಕಣಗಳಾಗಿವೆ. ಕೆಲವು ಆಟಗಾರರಿಗೆ ಲಯ ಕಂಡುಕೊಳ್ಳಲು ವಿಂಡೀಸ್ ಎದುರಿನ ಸರಣಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಅದರಲ್ಲೂ ಮೂರನೇ ಕ್ರಮಾಂಕದ ಬ್ಯಾಟರ್ ಸ್ಥಾನವನ್ನು ತುಂಬಲು ಹೆಚ್ಚು ಗಮನ ನೀಡಲಾಗುತ್ತಿದ್ದು ಸಾಯಿ ಸುದರ್ಶನ್ ಅವರು ತಮ್ಮ ಪ್ರತಿಭೆ ಮೆರೆಯಲು ಅವಕಾಶಗಳನ್ನು ನೀಡಲಾಗಿದೆ. ಆದರೆ ತಮಿಳುನಾಡಿನ 23 ವರ್ಷದ ಬ್ಯಾಟರ್ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ದೇಶದ ರಾಜಧಾನಿಯ ಅಂಗಳದಲ್ಲಿ ತಮ್ಮ ಸಾಮರ್ಥ್ಯ ತೋರುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವ ಸವಾಲು ಅವರ ಮುಂದಿದೆ.

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಎರಡು ಶತಕ ಮತ್ತು ಎರಡು ಅರ್ಧಶತಕ ದಾಖಲಿಸಿದ್ದರು. ಒಟ್ಟು 411 ರನ್ಗಳನ್ನು ಪೇರಿಸಿದ್ದರು. ದುಲೀಪ್ ಟ್ರೋಫಿಯಲ್ಲಿ 4 ಮತ್ತು 64 ರನ್ ಮಾತ್ರ ಗಳಿಸಿದ್ದರು. ಅಹಮದಾಬಾದ್ ಟೆಸ್ಟ್ನಲ್ಲಿಯೂ 36 ರನ್ ಮಾತ್ರ ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ತಂಡದಲ್ಲಿಯೂ ಸ್ಥಾನ ಪಡೆದಿರುವ ಯಶಸ್ವಿ ಲಯಕ್ಕೆ ಮರಳಬೇಕಿದೆ.

ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಉತ್ತಮ ಅವಕಾಶಗಳು ಸಿಗುತ್ತಿವೆ. ನಾಯಕ ಶುಭಮನ್ ಗಿಲ್ ಕೂಡ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳುವ ಭರವಸೆ ಮೂಡಿಸಿದ್ದಾರೆ. ಮೊದಲ ಟೆಸ್ಟ್ನಲ್ಲಿ ಅವರು ಕೆ.ಎಲ್. ರಾಹುಲ್ ಜೊತೆಗೆ ಚೆಂದದ ಜೊತೆಯಾಟವಾಡಿದ್ದರು.

ಭಾರತ ತಂಡವು ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಆದರೆ ಇದು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಸರಣಿಯಾಗಿರುವುದರಿಂದ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಆದ್ದರಿಂದ ಪೂರ್ಣ ಪಾಯಿಂಟ್ಸ್ ಗಳಿಸುವತ್ತಲೇ ಗಿಲ್ ಬಳಗದ ಚಿತ್ತವಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.