ನವದೆಹಲಿ: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರು ಈ ಹಿಂದೆ ಎಂದೂ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ. ಆದರೆ ಈ ಹಿಂದಿನ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದ ಭಾರತ ತಂಡವು ಶನಿವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಗೆದ್ದು, ಚಾರಿತ್ರಿಕ ಸಾಧನೆಗೈಯ್ಯುವತ್ತ ಕಣ್ಣಿಟ್ಟಿದೆ.

ಸರಣಿ ಸದ್ಯ 1–1 ಆಗಿದೆ. ಆದರೆ ಈ ಗುರಿ ಅಂದುಕೊಂಡಷ್ಟು ಸುಲಭವಲ್ಲ. ಮೊದಲ ಪಂದ್ಯದಲ್ಲಿ ದುರ್ಬಲ ಫೀಲ್ಡಿಂಗ್ನಿಂದ ಸೋತ ಭಾರತ ತಂಡ ಎರಡನೇ ಪಂದ್ಯದಲ್ಲಿ 102 ರನ್ಗಳ ಭಾರಿ ಜಯಗಳಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳೆಯರು ರನ್ ಆಧಾರದಲ್ಲಿ ಸಾಧಿಸಿದ ಅತಿ ದೊಡ್ಡ ಗೆಲುವು. 12 ಪಂದ್ಯಗಳಲ್ಲಿ ಗಳಿಸಿದ ಮೊದಲ ಜಯವೂ ಸಹ.

ಆದರೆ ಮೊದಲ ಪಂದ್ಯದಂತೆ ಎರಡನೇಯದರಲ್ಲೂ ಆತಿಥೇಯ ತಂಡದ ಕ್ಷೇತ್ರರಕ್ಷಣೆ ಉತ್ತಮವಾಗಿರಲಿಲ್ಲ. ಆರು ಕ್ಯಾಚುಗಳನ್ನು ಕೈಬಿಟ್ಟಿದ್ದರು.

ಸ್ಮೃತಿ ಮಂದಾನ ಮತ್ತು ಪ್ರತಿಕಾ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಪರದಾಡಿದೆ. ಶಫಾಲಿ ವರ್ಮಾ ಗೈರಿನಲ್ಲಿ ಉಪನಾಯಕಿ ಸ್ಮೃತಿ ಅವರೇ ಆಕ್ರಮಣಕಾರಿ ಆಟಗಾರ್ತಿಯ ಪಾತ್ರ ನಿಭಾಯಿಸಿದ್ದಾರೆ. ಎರಡನೇ ಪಂದ್ಯದ ಶತಕ ಅವರ ಪಾಲಿಗೆ ಏಕದಿನ ಪಂದ್ಯಗಳಲ್ಲಿ 12ನೆಯದು.

ಹರ್ಮನ್ಪ್ರೀತ್, ಹರ್ಲಿನ್ ಡಿಯೊಲ್, ರಿಚಾ ಘೋಷ್ ಅವರಿಂದ ಉಪಯುಕ್ತ ಆಟ ಬರಬೇಕಿದೆ.

ಆಸ್ಟ್ರೇಲಿಯಾ ತಂಡವೂ ತಿರುಗೇಟು ನೀಡಲು ಶಕ್ತಿಮೀರಿ ಪ್ರಯತ್ನಿಸಲಿದೆ. 2024ರ ಫೆಬ್ರುವರಿ ನಂತರ ಆಡಿದ 13 ಪಂದ್ಯಗಳಲ್ಲೂ ಅಲಿಸಾ ಹೀಲಿ ಪಡೆ ಸೋತಿರಲಿಲ್ಲ. ಆದರೆ ಭಾರಿ ಸೋಲು ಅದರ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಗಾಯಾಳಾಗಿದ್ದ ಆರಂಭ ಆಟಗಾರ್ತಿ ಫೋಬಿ ಲಿಚ್ಫೀಲ್ಡ್ ಅವರು ತಂಡಕ್ಕೆ ಮರಳುವುದು ಖಚಿತವಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.