ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಶೋ ಗಾಯಕರಿಗೆ ಒಂದು ಒಳ್ಳೆಯ ವೇದಿಕೆಯಾಗಿದೆ. ಕನ್ನಡದ ಸರಿಗಮಪ ಕಾರ್ಯಕ್ರಮ ಅದೆಷ್ಟೋ ಗಾಯಕರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ನಮ್ಮ ರಾಜ್ಯದ ಗಾಯಕರು ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಪರಭಾಷೆಯಲ್ಲೂ ಮೋಡಿ ಮಾಡುತ್ತಿದ್ದಾರೆ.
.ಬಿಗ್ಬಾಸ್ ಮನೆಯಲ್ಲಿ ಕಿರಿಕ್ ಮಾಡಿ ಅರ್ಧಕ್ಕೆ ಹೊರಬಂದ ಸ್ಪರ್ಧಿಗಳಿವರು!.
ಹೌದು, ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ರನ್ನರ್ ಅಪ್ ಆಗಿದ್ದ ಚಿಕ್ಕಮಗಳೂರಿನ ಶಿವಾನಿ ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಜೀ ತಮಿಳಿನ ಸರಿಗಮಪ ಸೀಸನ್ 5ರಲ್ಲಿ ಶಿವಾನಿ ತಮಿಳು ಹಾಡನ್ನು ಹಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಎಸ್ಪಿ.ಬಿ ರೌಂಡ್ನಲ್ಲಿ (ಎಸ್.ಪಿ.ಬಾಲಸುಬ್ರಹ್ಮಣ್ಯಂ) ಗಾಯಕಿ ಶಿವಾನಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ತಂಗಮಗನ್' ಸಿನಿಮಾದ ‘ವಾ ವಾ ಪಕ್ಕಂ ವಾ’ ಹಾಡನ್ನು ಬಹಳ ಸೊಗಸಾಗಿ ಹಾಡಿದ್ದಾರೆ.

‘ವಾ ವಾ ಪಕ್ಕಂ ವಾ’ ಹಾಡನ್ನು ತನ್ನದೇ ಶೈಲಿಯಲ್ಲಿ ಶಿವಾನಿ ಹಾಡಿದ್ದಾರೆ. ಆಗ ಶಿವಾನಿ ಹಾಡನ್ನು ಕೇಳಿದ ಜಡ್ಜ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಜೀ ತಮಿಳು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶಿವಾನಿ ಹಾಡಿದ ವಿಡಿಯೊವನ್ನು ಹಂಚಿಕೊಂಡಿದೆ. ಇದೇ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.