ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

INDW vs SAW | ಬ್ರಿಟ್ಸ್‌ ಅರ್ಧಶತಕ: ದಕ್ಷಿಣ ಆಫ್ರಿಕಾ ಉತ್ತಮ ಮೊತ್ತ

ಟಿ20 ಕ್ರಿಕೆಟ್: ಪೂಜಾ, ದೀಪ್ತಿಗೆ ತಲಾ ಎರಡು ವಿಕೆಟ್
Published 7 ಜುಲೈ 2024, 16:12 IST
Last Updated 7 ಜುಲೈ 2024, 16:12 IST
ಅಕ್ಷರ ಗಾತ್ರ

ಚೆನ್ನೈ: ಸರಣಿ ಜಯದತ್ತ ಚಿತ್ತ ನೆಟ್ಟಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಭಾನುವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತದ ವನಿತೆಯರಿಗೆ ಸ್ಪರ್ಧಾತ್ಮಕ ಗುರಿಯೊಡ್ಡಿತು. 

ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರವಾಸಿ ತಂಡವು ತಾಜ್ಮೀನ್ ಬ್ರಿಟ್ಸ್ (52; 39ಎ, 4X6, 6X1) ಮತ್ತು ಅನೆಕಿ ಬಾಷ್ (40; 32ಎ, 4X6) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 ರನ್ ಗಳಿಸಿತು. 

ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡವು 1–0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿಯೂ ಜಯಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ಛಲದಲ್ಲಿದೆ. ಅದಕ್ಕೆ ತಕ್ಕಂತೆ ಬ್ಯಾಟರ್‌ಗಳು ತಮ್ಮ ಕಾಣಿಕೆ ನೀಡಿದರು. ಭಾರತದ ಪೂಜಾ ವಸ್ತ್ರಕರ್ (37ಕ್ಕೆ2) ಮತ್ತು ದೀಪ್ತಿ ಶರ್ಮಾ (20ಕ್ಕೆ2) ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೂ ಬ್ಯಾಟರ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕುವಲ್ಲಿ ಉಳಿದ ಬೌಲರ್‌ಗಳು ವಿಫಲರಾದರು. 

ನಾಯಕಿ ಲೌರಾ ವೊಲ್ವಾರ್ಟ್ (22; 12 ಎಸೆತ) ಮತ್ತು ಬ್ರಿಟ್ಸ್‌ ಮೊದಲ ವಿಕೆಟ್ ಜೊತೆಯಾಟದಲ್ಲಿ  43 ರನ್‌ (4 ಓವರ್‌ಗಳಲ್ಲಿ) ಗಳಿಸಿ ಉತ್ತಮ ಆರಂಭ ನೀಡಿದರು. 

ಲೌರಾ ವಿಕೆಟ್ ಗಳಿಸಿದ ಪೂಜಾ ಅವರು ಜೊತೆಯಾಟವನ್ನು ಮುರಿದರು. ಇದಾಗಿ ನಾಲ್ಕು ಓವರ್‌ಗಳ ನಂತರ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಮರೈಜನ್ ಕ್ಯಾಪ್ ಕೂಡ ಔಟಾದರು. ಈ ಹಂತದಲ್ಲಿ ಬ್ರಿಟ್ಸ್ ಮತ್ತು ಬಾಷ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 38 ರನ್‌ ಸೇರಿಸಿದ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ದೀಪ್ತಿ ಬೌಲಿಂಗ್‌ನಲ್ಲಿ ತಾಜ್ಮೀನ್ ಔಟಾದ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಬೀಸಾಟಕ್ಕೆ ಒತ್ತು ನೀಡಿದರು. ಇದರಿಂದಾಗಿ ತಂಡದ ಮೊತ್ತವೂ ಹೆಚ್ಚಾಯಿತು. 

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 (ಲೌರಾ ವೊಲ್ವಾರ್ಟ್ 22, ತಾಜ್ಮೀನ್ ಬ್ರಿಟ್ಸ್ 52, ಮರೈಜನ್ ಕ್ಯಾಪ್ 20, ಅನೆಕೆ ಬಾಷ್ 40, ಪೂಜಾ ವಸ್ತ್ರಕರ್ 37ಕ್ಕೆ2, ದೀಪ್ತಿ ಶರ್ಮಾ 20ಕ್ಕೆ2) 

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಬ್ಯಾಟರ್ ತಾಜ್ಮೀನ್ ಬ್ರಿಟ್ಸ್‌ ಬ್ಯಾಟಿಂಗ್

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಬ್ಯಾಟರ್ ತಾಜ್ಮೀನ್ ಬ್ರಿಟ್ಸ್‌ ಬ್ಯಾಟಿಂಗ್ 

–ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT