ಮಂಗಳವಾರ, ಜೂನ್ 15, 2021
23 °C

ಕೋವಿಡ್ ಭೀತಿ?: ಆರ್‌ಸಿಬಿಯ ಜಂಪಾ, ರಿಚರ್ಡ್‌ಸನ್ ರಾತ್ರಿ ಆಸ್ಟ್ರೇಲಿಯಾಗೆ ವಾಪಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್‌ಸನ್ ಇಂದು ರಾತ್ರಿ ದೋಹಾ ಮೂಲಕ ತಮ್ಮ ದೇಶಕ್ಕೆ ಹಾರಲಿದ್ದಾರೆ.

ಇವರಿಬ್ಬರು ಪ್ರಸ್ತುತ ಮುಂಬೈನಲ್ಲಿದ್ದಾರೆ. ಆದರೆ, ಇವರ ಫ್ರ್ಯಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಹಮದಾಬಾದ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಐಪಿಎಲ್ ಪಂದ್ಯದಲ್ಲಿ ಸೆಣೆಸುತ್ತಿದೆ.

‘ಇವರಿಬ್ಬರು ಇಂದು ರಾತ್ರಿ ದೋಹಾ ಮೂಲಕ ಆಸ್ಟ್ರೇಲಿಯಾಕ್ಕೆ ಹಿಂತಿರುಗಲಿದ್ದಾರೆ’ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ಈಗಾಗಲೇ, ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಆ್ಯಂಡ್ರೂ ಟೈ ಅವರು ಭಾರತದಲ್ಲಿ ಕೋವಿಡ್ ಉಲ್ಬಣದಿಂದಾಗಿ ದೇಶದಿಂದ ನಿರ್ಗಮಿಸಿದ್ದಾರೆ. ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶದಲ್ಲಿ ವಿಪರೀತ ಪರಿಣಾಮ ಬೀರಿರುವುದರಿಂದ ಆಸ್ಟ್ರೇಲಿಯಾವು ಇಂದಿನಿಂದ ಮೇ 15 ರವರೆಗೆ ಭಾರತದಿಂದ ಆಗಮಿಸುವ ವಿಮಾನಗಳಿಗೆ ನಿಷೇಧ ಹೇರಿದೆ.

ಸದ್ಯ, ಐಪಿಎಲ್‌ನಲ್ಲಿ ಇನ್ನೂ 14 ಆಸ್ಟ್ರೇಲಿಯಾದ ಆಟಗಾರರಿದ್ದಾರೆ. ಇದರಲ್ಲಿ ಸ್ಟೀವ್ ಸ್ಮಿತ್ (ದೆಹಲಿ ಕ್ಯಾಪಿಟಲ್ಸ್), ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್) ಮತ್ತು ಪ್ಯಾಟ್ ಕಮ್ಮಿನ್ಸ್ (ಕೋಲ್ಕತಾ ನೈಟ್ ರೈಡರ್ಸ್) ಇದರಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.

ಆಸ್ಟ್ರೇಲಿಯಾದ ಹೈ ಪ್ರೊಫೈಲ್ ತರಬೇತುದಾರರಲ್ಲಿ ರಿಕಿ ಪಾಂಟಿಂಗ್ (ಡಿಸಿ) ಮತ್ತು ಸೈಮನ್ ಕ್ಯಾಟಿಚ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡದಲ್ಲಿದ್ದಾರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್, ಬ್ರೆಟ್ ಲೀ ಮತ್ತು ಲಿಸಾ ಸ್ಥಾಲೇಕರ್ ಪಂದ್ಯಾವಳಿಯ ಕಾಮೆಂಟರಿ ತಂಡದ ಭಾಗವಾಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು