ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20: ಭಾರತ ಮಹಿಳಾ ತಂಡದ ಬಾಂಗ್ಲಾ ಪ್ರವಾಸ

Published 4 ಏಪ್ರಿಲ್ 2024, 4:25 IST
Last Updated 4 ಏಪ್ರಿಲ್ 2024, 4:25 IST
ಅಕ್ಷರ ಗಾತ್ರ

ಡಾಕಾ ಭಾರತ ಮಹಿಳಾ ಕ್ರಿಕೆಟ್ ತಂಡವು ಆತಿಥೇಯರ ವಿರುದ್ಧ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗಾಗಿ  ಏಪ್ರಿಲ್ 28 ರಿಂದ ಮೇ 9 ರವರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಂಚಿಕೊಂಡ ಮಾಹಿತಿ ಪ್ರಕಾರ, ಭಾರತವು ಏಪ್ರಿಲ್ 23 ರಂದು ಬಾಂಗ್ಲಾದೇಶಕ್ಕೆ ಆಗಮಿಸಲಿದ್ದು, ಮೇ 10 ರಂದು ದೇಶವನ್ನು ತೊರೆಯಲಿದೆ.

ಸರಣಿಯ ಮೊದಲ ಪಂದ್ಯ ಹಗಲು-ರಾತ್ರಿ ಪಂದ್ಯವಾಗಿದ್ದು, ಏಪ್ರಿಲ್ 28 ರಂದು ನಡೆಯಲಿದ್ದು, ನಂತರ ಏಪ್ರಿಲ್ 30 (ಹಗಲು/ರಾತ್ರಿ ), ಮೇ 2, ಮೇ 6 ಮತ್ತು ಮೇ 9 ರಂದು ಪಂದ್ಯಗಳು ನಡೆಯಲಿವೆ.

ಎಲ್ಲಾ ಪಂದ್ಯಗಳು ಸಿಲೆಟ್‌ ನಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT