ಮಂಗಳವಾರ, ಏಪ್ರಿಲ್ 13, 2021
25 °C

ಟೆಸ್ಟ್‌ನಲ್ಲಿ ವಿರಾಟ್ 2 ಬಾರಿ ರನೌಟ್; ಇಲ್ಲಿದೆ ಕುತೂಹಲಕಾರಿ ಅಂಶ!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಅಡಿಲೇಡ್‌: ಇಲ್ಲಿನ ಅಡಿಲೇಡ್ ಓವಲ್ ಮೈದಾನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಹಲವು ಸ್ಮರಣೀಯ ನೆನಪುಗಳನ್ನು ಸನ್ಮಾನಿಸಿದೆ. ಆದರೆ ಕುತೂಹಲದಾಯಕ ಅಂಶವೆಂದರೆ ಟೆಸ್ಟ್ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ ಎರಡೇ ಎರಡು ಬಾರಿ ಮಾತ್ರ ರನೌಟ್ ಆಗಿದ್ದಾರೆ. ಅದು ಕೂಡಾ ಇದೇ ಅಡಿಲೇಡ್ ಓವಲ್ ಮೈದಾನದಲ್ಲಿ!

ಹೌದು, ಹೀಗೊಂದು ಆಸಕ್ತಿದಾಯಕ ಸಂಗತಿಯನ್ನು ನೀವು ಒಪ್ಪಲೇ ಬೇಕು. ಸಾಮಾನ್ಯವಾಗಿ ವಿಕೆಟ್ ನಡುವೆ ಚುರುಕಾಗಿ ಓಡುವ ವಿರಾಟ್ ಕೊಹ್ಲಿ ಅವರನ್ನು ರನೌಟ್ ಮಾಡಲು ಫೀಲ್ಡರ್‌ಗಳು ಹರಸಾಹಸ ಪಡಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ದ ಸಾಗುತ್ತಿರುವ ಮೊತ್ತ ಮೊದಲ ಪಿಂಕ್ ಬಾಲ್ ಹೊನಲು-ಬೆಳಕಿನ ಟೆಸ್ಟ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಶತಕದತ್ತ ಮುನ್ನುಗ್ಗಿದ್ದರು.

ಇದನ್ನೂ ಓದಿ: 

ಆದರೆ ಸಹ ಆಟಗಾರ ಅಜಿಂಕ್ಯ ರಹಾನೆ ಜೊತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ರನೌಟ್‌ಗೆ ವಿಕೆಟ್ ಒಪ್ಪಿಸಬೇಕಾಯಿತು. ತಕ್ಷಣ ತಮ್ಮ ತಪ್ಪು ಒಪ್ಪಿಕೊಂಡ ಉಪ ನಾಯಕ ಅಜಿಂಕ್ಯ ರಹಾನೆ, ಕ್ಷಮೆಯಾಚನೆ ನಡೆಸಿದರು.

 

 

 

ಈ ಸಂದರ್ಭದಲ್ಲಿ ಪಕ್ವತೆಯನ್ನು ಮೆರೆದ ವಿರಾಟ್ ಕೊಹ್ಲಿ, ಸಹ ಆಟಗಾರನ ಮೇಲೆ ಕುಪಿತರಾಗಿಲ್ಲ. ಬದಲಾಗಿ ನಿರಾಸೆಯಿಂದ ತಲೆ ತಗ್ಗಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ: 

 

180 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಎಂಟು ಬೌಂಡರಿಗಳ ನೆರವಿನಿಂದ 74 ರನ್ ಗಳಿಸಿದರು. ಇದರೊಂದಿಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಆರು ವಿಕೆಟ್ ನಷ್ಟಕ್ಕೆ 233 ರನ್ ಪೇರಿಸಿದೆ. ಕೊಹ್ಲಿ ಹಾಗೂ ರಹಾನೆ ನಾಲ್ಕನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ಕೊಹ್ಲಿ ಪಾಲಿಗೆ ಅಡಿಲೇಡ್ ಮೈದಾನವು ಫೇವರಿಟ್ ತಾಣವೆನಿಸಿದೆ. ಇದೇ ಮೈದಾನದಲ್ಲಿ ಮೂರು ಶತಕ ಸಾಧನೆಯನ್ನು ಮಾಡಿದ್ದಾರೆ.

ಅಡಿಲೇಡ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ಸಾಧನೆ ಇಂತಿದೆ: 116, 22, 115, 141, 3, 34 ಮತ್ತು 74.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು