ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂತ್‌ ಹೀಗೆಯೇ ಬ್ಯಾಟಿಂಗ್ ಮಾಡಿದರೆ ಧೋನಿ‌ಯನ್ನು ಹಿಂದಿಕ್ಕುತ್ತಾರೆ:‌ ಇಂಜಮಾಮ್

ಫಾಲೋ ಮಾಡಿ
Comments

ನವದೆಹಲಿ: ಟೀಂ ಇಂಡಿಯಾದಯುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಆಟದ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್‌ ಇದೇ ರೀತಿಯಲ್ಲಿ ಬ್ಯಾಟಿಂಗ್‌ ಮುಂದುವರಿಸಿದರೆ ಎಂ.ಎಸ್‌. ಧೋನಿ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿರುವ ಪಂತ್‌, ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿರುವ, ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಕೇವಲ40 ಎಸೆತಗಳಲ್ಲಿ77 ರನ್‌ ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತಾದರೂ,ಪಂತ್ ಬ್ಯಾಟಿಂಗ್‌ ಅತ್ಯುತ್ತಮವಾಗಿತ್ತು ಎಂದು ಇಂಜಮಾಮ್ ಹೊಗಳಿದ್ದಾರೆ. ಮಾತ್ರವಲ್ಲದೆ, ಕಳೆದ ಕೆಲವು ತಿಂಗಳುಗಳಲ್ಲಿ ಅವರ ಬ್ಯಾಟಿಂಗ್‌ನಲ್ಲಿ ಸುಧಾರಣೆಯಾಗಿದೆ ಎಂದೂ ಹೇಳಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಪಾಕ್‌ ಮಾಜಿ ನಾಯಕ,ʼಭಾರತ ತಂಡದ ಕೆಳಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಿದ ರಿಷಭ್‌ ಪಂತ್‌, 40 ಎಸೆತಗಳಲ್ಲಿ 77 ರನ್‌ ಗಳಿಸಿದರು. ಆತನಿಂದ ಭಾರತದರನ್ ‌ಗಳಿಕೆ ಏರಿತು. ಕಳೆದ 6-7 ತಿಂಗಳಿನಿಂದ ಪಂತ್‌ಆಟ ಗಮನಿಸುತ್ತಿದ್ದೇನೆ. ಆತ ಬ್ಯಾಟಿಂಗ್‌ ಮಾಡುವ ರೀತಿ ಮತ್ತು ವಿವಿಧ ಕ್ರಮಾಂಕಗಳಲ್ಲಿ ಪರಿಣಾಮಕಾರಿಯಾಗಿ ರನ್‌ ಗಳಿಸುವುದು ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.

ʼತಮ್ಮನ್ನು ತಾವು ತೆರೆದುಕೊಳ್ಳುವ ರೀತಿ ಮತ್ತು ಆತ ಭಾರಿಸುವ ಹೊಡೆಗಳನ್ನು ಕಳೆದ30-35 ವರ್ಷಗಳಲ್ಲಿ ನಾನು ಕೇವಲ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಿಂದ ಮಾತ್ರವೇ ನೋಡಿದ್ದೇನೆ. ಆ ಇಬ್ಬರು ಎಂ.ಎಸ್‌. ಧೋನಿ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌.ಅವರಿಬ್ಬರು ಪಂದ್ಯವನ್ನು ಬದಲಿಸಬಲ್ಲವರು. ಪಂತ್ಯಾವ ರೀತಿಯ ಪ್ರದರ್ಶನ ನೀಡುತ್ತಿದ್ದಾರೆ ಎಂದರೆ, ಅವರು ಇದೇ ರೀತಿಯ ಆಟ ಮುಂದುವರಿಸಿದರೆ ಆ ಇಬ್ಬರನ್ನೂ (ಎಂ.ಎಸ್‌. ಧೋನಿ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್) ಹಿಂದಿಕ್ಕುತ್ತಾರೆ ಮತ್ತು ಒಂದಿಷ್ಟು ಅಂತರವನ್ನೂ ಕಾಯ್ದುಕೊಳ್ಳುತ್ತಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಸರಣಿ 1-1ರಲ್ಲಿ ಸಮಬಲವಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯ ಇಂದು ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT