ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | CSK Vs RCB ನಡುವಿನ ಮೊದಲ ಪಂದ್ಯಕ್ಕೆ ದಾಖಲೆಯ ವೀಕ್ಷಕರು

Published 28 ಮಾರ್ಚ್ 2024, 9:56 IST
Last Updated 28 ಮಾರ್ಚ್ 2024, 9:56 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್‌ (ಐಪಿಎಲ್‌)ನ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯವು 16.8 ಕೋಟಿ ವೀಕ್ಷಕರನ್ನು ಸೆಳೆದಿದೆ ಎಂದು ಟೂರ್ನಿಯ ಆಧಿಕೃತ ಪ್ರಸಾರಕರು ಗುರುವಾರ ಮಾಹಿತಿ ನೀಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಡುವೆ ಮಾ.22ರಂದು ಮೊದಲ ಪಂದ್ಯ ನಡೆದಿತ್ತು. ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿತ್ತು.

ಮೊದಲ ದಿನ 1276 ಕೋಟಿ ವೀಕ್ಷಕ ಗಂಟೆಗಳು ದಾಖಲಾಗಿದ್ದು, ಇದು ಐಪಿಎಲ್‌ನ ಯಾವುದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದಾಖಲಾದ ಅತೀ ಹೆಚ್ಚು ಸಮಯ ಎಂದು ಡಿಸ್ನಿ ಸ್ಟಾರ್‌ ಹೇಳಿದೆ.

ಗರಿಷ್ಠ ಟಿವಿ ವೀಕ್ಷಣೆಗೂ ಐಪಿಎಲ್‌ನ 17ನೇ ಋತುವಿನ ಆರಂಭಿಕ ದಿನ ಸಾಕ್ಷಿಯಾಯಿತು. ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ 6.1 ಕೋಟಿ ವೀಕ್ಷಕರು ಏಕಕಾಲದಲ್ಲಿ ಪಂದ್ಯದ ಪ್ರಸಾರವನ್ನು ವೀಕ್ಷಿಸಿದರು.

ಡಿಸ್ನಿ ಸ್ಟಾರ್‌ ಆ ದಿನ 870 ಕೋಟಿ ನಿಮಿಷ ವೀಕ್ಷಕ ಗಂಟೆಗಳನ್ನು ದಾಖಲಿಸಿತು. ಕಳೆದ ಆವೃತ್ತಿಯ ಟಿ.ವಿ ವೀಕ್ಷಕರಿಗೆ ಹೋಲಿಸಿದರೆ ಇದು ಶೇ 16ರಷ್ಟು ಹೆಚ್ಚು ಎಂದು ಕಂಪನಿ ಮಾಹಿತಿ ನೀಡಿದೆ.

ಟೂರ್ನಿಯ ಡಿಜಿಟಲ್ ಪ್ರಸಾರಕ ಜಿಯೊ ಸಿನಿಮಾವು ಮೊದಲ ದಿನ 11.3 ಕೋಟಿ ವೀಕ್ಷಕರನ್ನು ಸೆಳೆದಿದೆ. ಮೊದಲ ದಿನ 660 ಕೋಟಿ ವೀಕ್ಷಕ ನಿಮಿಷಗಳು ದಾಖಲಾಗಿವೆ ಎಂದು ಜಿಯೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT