ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಹರಾಜು: ಕಣದಲ್ಲಿರುವ ಅತ್ಯಂತ ಹಿರಿಯ ಮತ್ತು ಕಿರಿಯ ಆಟಗಾರರು ಯಾರು?

ಕೋಲ್ಕತ್ತದಲ್ಲಿ ಬಿಡ್
Last Updated 19 ಡಿಸೆಂಬರ್ 2019, 9:19 IST
ಅಕ್ಷರ ಗಾತ್ರ

ಕೋಲತ್ತ:ಐಪಿಎಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಕಣದಲ್ಲಿರುವ ಒಟ್ಟು 332 ಆಟಗಾರರ ಸಾಮರ್ಥ್ಯವನ್ನು ಅಳೆದು ತೂಗಿರುವ ಪ್ರಾಂಚೈಸ್‌ಗಳು ಅಖಾಡಕ್ಕಿಳಿಯಲು ಸಜ್ಜಾಗಿವೆ.

ಹಿಂದಿನ ಟೂರ್ನಿಗಳಲ್ಲಿ ಮಿಂಚಿದ್ದ ಹಾಗೂ ವೈಫಲ್ಯ ಅನುಭವಿಸಿದ್ದ ಹಲವರನ್ನು ಕೈಬಿಟ್ಟಿರುವ ತಂಡಗಳು ಹೊಸಬರತ್ತ ಮುಖಮಾಡಿವೆ. ರಾಬಿನ್‌ ಉತ್ತಪ್ಪ, ಆ್ಯರನ್‌ ಫಿಂಚ್‌, ಕ್ರಿಸ್‌ ಲಿನ್‌,ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಷೆಲ್‌ ಮಾರ್ಷ್‌, ಡೇಲ್‌ ಸ್ಟೇಯ್ನ್‌, ಏಂಜೆಲೊ ಮ್ಯಾಥ್ಯೂಸ್‌,ಯೂಸುಫ್‌ ಪಠಾಣ್‌ ಹೀಗೆ ಘಟಾನುಘಟಿ ಆಟಗಾರರು ಕಣದಲ್ಲಿದ್ದರೂಬಹುತೇಕ ಪ್ರಾಂಚೈಸ್‌ಗಳ ಮೊದಲ ಆಯ್ಕೆ ವೆಸ್ಟ್‌ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ಆಟಗಾರರೇ ಆಗಲಿದ್ದಾರೆ ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

ಇದೆಲ್ಲದರ ನಡುವೆಯೂ ಮಹಾರಾಷ್ಟ್ರದ ಪ್ರವೀಣ್‌ ತಾಂಬೆ ಹಾಗೂ ಅಫ್ಗಾನಿಸ್ತಾನದ ನೂರ್‌ ಅಹಮದ್‌ ಎಲ್ಲರಗಮನ ಸೆಳೆದುಕೊಂಡಿದ್ದಾರೆ.ಏಕೆಂದರೆ, ಈ ಬಾರಿಯ ಹರಾಜಿಗೆ ಪ್ರಕ್ರಿಯೆಯಲ್ಲಿ ಕಣದಲ್ಲಿರುವ ಅತ್ಯಂತ ಹಿರಿಯ ಮತ್ತು ಕಿರಿಯ ಆಟಗಾರ ಎಂಬ ಖ್ಯಾತಿ ಈ ಇಬ್ಬರದು.

ಪ್ರವೀಣ್‌ ತಾಂಬೆ
ಪ್ರವೀಣ್‌ ತಾಂಬೆ

ಬಲಗೈ ಸ್ಪಿನ್‌ ಬೌಲರ್‌ ಆಗಿರುವ ಥಾಂಬೆ ವಯಸ್ಸು ಈಗ 48 ವರ್ಷ 72 ದಿನಗಳು. ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅವರು, ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಪರಇದುವರೆಗೆ ಒಟ್ಟು 33 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ 30.46ರ ಸರಾಸರಿಯಲ್ಲಿ 28 ವಿಕೆಟ್‌ ಗಳಿಸಿದ್ದಾರೆ.ಇವರಿಗೆ ₹ 20 ಲಕ್ಷ ಮೂಲ ಬೆಲೆ ನಿಗದಿಪಡಿಸಲಾಗಿದೆ.

ಅಫ್ಗಾನ್‌ನಲ್ಲಿ 19 ವರ್ಷದೊಳಗಿನವರ ವಿಭಾಗದ ವಿವಿಧ ಟೂರ್ನಿಗಳಲ್ಲಿ ಉತ್ತಮ ಆಟವಾಡಿರುವನೂರ್ ಅಹಮದ್‌ ಅವರಿಗೆಈಗ ವಯಸ್ಸು 14 ವರ್ಷ, 350 ದಿನಗಳು. ಹದಿನೈದು ವರ್ಷ ತುಂಬಲು ಇನ್ನೂ ಹದಿನೈದು ದಿನ ಬೇಕಿರುವ ಈತಚೈನಾಮನ್ ಶೈಲಿಯ ಬೌಲರ್‌. ₹30 ಲಕ್ಷ ಮೂಲಬೆಲೆ ಹೊಂದಿರುವ ಈ ಪೋರಯಾವ ಫ್ರ್ಯಾಂಚೈಸ್‌ ಪಾಲಾಗುವರು ಎಂಬುದು ಕುತೂಹಲದ ಸಂಗತಿ.

ನೂರ್ ಅಹಮದ್‌
ನೂರ್ ಅಹಮದ್‌

ಅಫ್ಗನ್ ಆಟಗಾರರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರುಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನೂರ್‌ ಕೂಡ ಅದೇಹಾದಿಯಲ್ಲಿ ಸಾಗುವ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT