ಗುರುವಾರ , ನವೆಂಬರ್ 26, 2020
21 °C

ಬೆವರು–ಇಬ್ಬನಿ ನಡುವೆ ವಿಕೆಟ್‌ ಪಡೆಯುವುದು ಬೆಕ್ಕು–ಇಲಿ ಆಟದಂತೆ: ಬೂಮ್ರಾ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆವರು ಮತ್ತು ಇಬ್ಬನಿ ನಡುವೆ ವಿಕೆಟ್‌ ಪಡೆಯುವುದು ಬೆಕ್ಕು –ಇಲಿ ಆಟದಂತೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜಸ್‌ಪ್ರೀಸ್‌ ಬೂಮ್ರಾ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 13 ಪಂದ್ಯಗಳನ್ನು ಆಡಿರುವ ಬೂಮ್ರಾ 23 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೂರ್ನಿಯ ಆರಂಭದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಬೂಮ್ರಾ 4 ಓವರ್‌ಗಳಲ್ಲಿ 43 ರನ್‌ ನೀಡಿ ಕೇವಲ ಒಂದು ವಿಕೆಟ್‌ ಪಡೆದಿದ್ದರು. ಬಳಿಕ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 32 ರನ್‌ ನೀಡಿ ದುಬಾರಿ ಎನ್ನಿಸಿದ್ದರು.

ಆರ್‌ಸಿಬಿ ವಿರುದ್ಧದ ಮೂರನೇ ಪಂದ್ಯದಲ್ಲಿ 4 ಓವರ್‌ಗಳಲ್ಲಿ 42 ರನ್‌ ನೀಡಿದ್ದರು. ನಾಲ್ಕನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್ ವಿರುದ್ಧ 18 ರನ್‌ ನೀಡಿ 2 ವಿಕೆಟ್‌ ಕಬಳಿಸಿದ್ದರು. ನಂತರ ಆಡಿದ ಪಂದ್ಯಗಳಲ್ಲಿ ಬೂಮ್ರಾ ಪ್ರಾಬಲ್ಯ ಮೆರೆದಿದ್ದರು.

‘ನಮ್ಮ ನಿರ್ಧಾರಗಳ ಮೇಲೆ ವಾತಾವರಣ ಹೆಚ್ಚು ಪರಿಣಾಮ ಬೀರುತ್ತದೆ. ದುಬೈನಲ್ಲಿ ಹೆಚ್ಚು ಬಿಸಿಲಿನ ವಾತಾವರಣವಿದ್ದು, ಒದ್ದೆಯಾದ ಬಾಲ್‌ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುತ್ತದೆ’ ಎಂದು ಬೂಮ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ ನಡೆದ ಐಪಿಎಲ್‌–2020 ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು