ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧನಡೆಯುತ್ತಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದರು.
ಧೋನಿ ಅವರಿಗೆ ಇದು 194ನೇ ಪಂದ್ಯ. ಸಹ ಆಟಗಾರ ಸುರೇಶ್ ರೈನಾ ಅವರುಐಪಿಎಲ್‌ನಲ್ಲಿ 193ಪಂದ್ಯಗಳಲ್ಲಿ ಆಡಿದ್ದಾರೆ.
ಧೋನಿ ಇದುವರೆಗೆ ಒಟ್ಟು 163 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದು, 100ರಲ್ಲಿ ಗೆಲುವು ಸಾಧಿಸಿದೆ. ಇದುವರೆಗೆ ಒಟ್ಟು 4,476 ರನ್ ರನ್ ಗಳಿಸಿದ್ದಾರೆ. 212 ಸಿಕ್ಸರ್‌ಗಳನ್ನು ಸಿಡಿಸಿದ್ದು, ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಸ್ಟಂಪಿಂಗ್ ಮತ್ತು 102 ಕ್ಯಾಚ್ ಪಡೆದಿದ್ದಾರೆ.
ಸನ್‌ರೈಸರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿದೆ. 6 ಓವರ್‌ಗಳ ಆಟ ಮುಗಿದಿದ್ದು, ರೈಸರ್ಸ್ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ. ಕನ್ನಡಿಗ ಮನಿಷ್ ಪಾಂಡೆ (27)ಮತ್ತು ನಾಯಕ ಡೇವಿಡ್ ವಾರ್ನರ್ (13) ಕ್ರೀಸ್‌ನಲ್ಲಿದ್ದಾರೆ.
ಆಡುವ ಹನ್ನೊಂದರ ಬಳಗ ಚೆನ್ನೈ ಸೂಪರ್‌ಕಿಂಗ್ಸ್:ಶೇನ್ ವಾಟ್ಸನ್, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿ, ಕೇದಾರ್ ಜಾಧವ್,ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಡ್ವೇನ್ ಬ್ರಾವೊ, ರವಿಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕರೂರ್, ಪಿಯೂಷ್ ಚಾವ್ಲಾ, ದೀಪಕ್ ಚಹಾರ್