ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್–2020 ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೆ ತಲುಪುವ ಅವಕಾಶಗಳು ಮುಗಿದಿವೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ. ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ತಂಡ ಈ ಬಾರಿ ಆಡಿರುವ ಹತ್ತು ಪಂದ್ಯಗಳಲ್ಲಿ 7 ಸೋಲುಗಳನ್ನು ಅನುಭವಿಸಿ ಮೂರರಲ್ಲಷ್ಟೇ ಗೆದ್ದಿದೆ. ಹೀಗಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಕ್ರೀಡಾ ವಾಹಿನಿ ಸ್ಟಾರ್ಸ್ಪೋರ್ಟ್ಸ್ ಜೊತೆ ಈ ಬಗ್ಗೆ ಮಾತನಾಡಿರುವ ಸ್ಟೈರಿಸ್, ಸಿಎಸ್ಕೆ ತನ್ನ ಮುಂದಿನ ನಾಲ್ಕೂ ಪಂದ್ಯಗಳಲ್ಲಿ ಗೆದ್ದರೂ 14 ಪಾಯಿಂಟ್ಸ್ಗಳನ್ನು ಗಳಿಸಿಕೊಳ್ಳುತ್ತದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ 14 ಪಾಯಿಂಟ್ಸ್ಗಳನ್ನು ಹೊಂದಿವೆ. ಮುಂಬೈ ಇಂಡಿಯನ್ಸ್ 12 ಪಾಯಿಂಟ್ಸ್ಗಳನ್ನು ಹೊಂದಿದ್ದು, ಈ ಮೂರು ತಂಡಗಳು ಪ್ಲೇ ಆಫ್ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.ನನಗನಿಸುತ್ತದೆ ಚೆನ್ನೈ ಸದ್ಯ ಟೂರ್ನಿಯಿಂದ ಹೊರಬಿದ್ದಿರುವ ಒಂದು ತಂಡವಾಗಿದೆ ಎಂದು ಹೇಳಿದ್ದಾರೆ.

ಮುಂದುವರಿದು,30 ವರ್ಷ ದಾಟಿದ ಆಟಗಾರರ ತಂಡವನ್ನೇ ಮೂರು ವರ್ಷಗಳಿಂದ ಮುಂದುವರಿಸುತ್ತಿರುವುದು ಮತ್ತು ಯುವ ಆಟಗಾರರಿಗೆ ಅವಕಾಶ ನೀಡದಿರುವುದು ಅಪಾಯಕಾರಿ. ಆ ತಂಡಕಳೆದ ವರ್ಷದಂತೆ ಉತ್ತಮ ಸಾಧನೆ ಮಾಡಲು ಚೆನ್ನಾಗಿ ಆಡಿದ್ದಾರೆ. ತಂಡದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಸಾಕಷ್ಟು ಆಟಗಾರರಿದ್ದರೂ ಫಾರ್ಮ್ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಸ್ಥಿರ ಪ್ರದರ್ಶನ ತೋರುತ್ತಿರುವ ಫಾಫ್ ಡು ಪ್ಲೆಸಿ ಮತ್ತು ದೀಪಕ್ ಚಹಾರ್ ಹೊರತುಪಡಿಸಿ ಉಳಿದವರು ವೈಫಲ್ಯ ಅನುಭವಿಸಿದ್ದಾರೆಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.