ಶುಕ್ರವಾರ, ನವೆಂಬರ್ 27, 2020
18 °C

RCB vs KKR: ಆರ್‌ಸಿಬಿಗೆ 8 ವಿಕೆಟ್‌ ಜಯ; ಕೊಹ್ಲಿ 500 ಫೋರ್‌ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌

ಅಬುಧಾಬಿ: ಆರ್‌ಸಿಬಿ ಬುಧವಾರ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ತಂಡವನ್ನು ಕೇವಲ 84 ರನ್‌ಗಳಿಗೆ ಆರ್‌ಸಿಬಿ ಬೌಲರ್‌ಗಳಿ ಕಟ್ಟಿ ಹಾಕಿದರು.

ಕೆಕೆಆರ್‌ ನೀಡಿದ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಬಹುಬೇಗ ಗೆಲುವು ಸಾಧಿಸುವ ಉತ್ಸಾಹ ತೋರಿತಾದರೂ ಫರ್ಗ್ಯುಸನ್‌ ಅದಕ್ಕೆ ಬ್ರೇಕ್‌ ಹಾಕಿದರು. 7ನೇ ಓವರ್‌ನಲ್ಲಿ ಆ್ಯರನ್ ಫಿಂಚ್ (16)  ವಿಕೆಟ್‌ ಗಳಿಸಿದರು, ಅದೇ ಓವರ್‌ನಲ್ಲಿ ಪಡಿಕ್ಕಲ್‌ (25) ರನ್‌ಔಟ್‌ನಿಂದ ಹೊರ ನಡೆದರು.

7 ಓವರ್‌ಗಳಲ್ಲಿ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 46 ರನ್‌ ಗಳಿಸಿತ್ತು. ಅನಂತರ ಕಣಕ್ಕಿಳಿದ ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌ ಮನ್ ನಿಧಾನ ಗತಿಯಲ್ಲಿ ಆಟ ನಡೆಸಿದರು.

ಗುರ್‌ಕೀರತ್‌ 4 ಫೋರ್‌ ಸಿಡಿಸಿ 21 ರನ್‌ ಗಳಿಸಿದರು. ಕೊಹ್ಲಿ 18 ರನ್‌ ಕಲೆ ಹಾಕಿದರು. ಈ ಮೂಲಕ ಆರ್‌ಸಿಬಿ 13.3 ಓವರ್‌ಗಳಲ್ಲಿ 8 ವಿಕೆಟ್‌ಗಳ  ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಪಾಯಿಂಟ್‌ ಪಡೆದು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಕೊಹ್ಲಿ 500 ಫೋರ್ ದಾಖಲೆ: ವಿರಾಟ್‌ ಕೊಹ್ಲಿ 5,500 ರನ್‌ ಪೂರೈಸಿದರು ಹಾಗೂ ಎರಡು ಫೋರ್‌ ಹೊಡೆಯುವ ಮೂಲಕ ಐಪಿಎಲ್‌ನಲ್ಲಿ 500 ಫೋರ್‌ಗಳನ್ನು ದಾಖಲಿಸಿದರು. ಶಿಖರ್‌ ಧವನ್‌ ಐಪಿಎಲ್‌ನಲ್ಲಿ ಅತಿ ಹೆಚ್ಚು ಫೋರ್‌ (549) ಗಳಿಸಿರುವ ದಾಖಲೆ ಹೊಂದಿದ್ದಾರೆ. 500 ಫೋರ್‌ ಪೂರೈಸಿದ ಎರಡನೇ ಆಟಗಾರ ಕೊಹ್ಲಿ.186 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಕೆಕೆಆರ್‌ನ ಪ್ಯಾಟ್‌ ಕಮಿನ್ಸ್,  ಪ್ರಸಿಧ್ ಕೃಷ್ಣ ಹಾಗೂ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಆರ್‌ಸಿಬಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: IPL 2020 | RCB vs KKR: ಆರ್‌ಸಿಬಿಗೆ 8 ವಿಕೆಟ್‌ಗಳ ಸುಲಭ ಜಯ

ಸಿರಾಜ್‌ ಐಪಿಎಲ್‌ನಲ್ಲಿ ಹೊಸ ದಾಖಲೆ:  ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳದ್ದೇ ಕಾರುಬಾರು. ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಕೇವಲ 84 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಮೊಹಮ್ಮದ್ ಸಿರಾಜ್‌ ಪ್ರಮುಖ ಪಾತ್ರ ವಹಿಸಿದರು. ಮಿಂಚಿ ಪ್ರದರ್ಶನದ ಮೂಲಕ ಒಂದೂ ರನ್‌ ಬಿಟ್ಟು ಕೊಡದೆಯೇ ಮೂರು ವಿಕೆಟ್‌ ಗಳಿಸಿದರು. ಇದರೊಂದಿಗೆ ಎರಡು ಮೇಡನ್‌ ಓವರ್‌ ಮಾಡಿರುವ ಸಾಧನೆಗೂ ಪಾತ್ರರಾದರು, ಈ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು.

ನಾಲ್ಕು ಓವರ್‌ಗಳಲ್ಲಿ 8ರನ್‌ ನೀಡಿ ಮೂರು ವಿಕೆಟ್‌ ಗಳಿಸುವ ಮೂಲಕ ಕೆಕೆಆರ್‌ಗೆ ದೊಡ್ಡ ಆಘಾತ ನೀಡಿದರು. ಕೆಕೆಆರ್‌ 14 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: RCB vs KKR: ಸಿರಾಜ್‌ ಐಪಿಎಲ್‌ನಲ್ಲಿ ಹೊಸ ದಾಖಲೆ; 3 ವಿಕೆಟ್, 2 ಮೇಡನ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು