ಶನಿವಾರ, ನವೆಂಬರ್ 28, 2020
18 °C

IPL-2020 | ಬೂಮ್ರಾ vs ರಬಾಡ: ಪರ್ಪಲ್ ಕ್ಯಾಪ್‌ಗಾಗಿ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಐಪಿಎಲ್‌–2020 ಟೂರ್ನಿಯ ಫೈನಲ್‌ ಪಂದ್ಯವು ಇಂದು ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರೆ, ಈ ತಂಡಗಳ ಪ್ರಮುಖ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಕಗಿಸೊ ರಬಾಡ ನಡುವೆ ಪರ್ಪಲ್‌ ಕ್ಯಾಪ್‌ಗಾಗಿ ಪೈಪೋಟಿ ನಡೆಯಲಿದೆ.

ಟೂರ್ನಿಯಲ್ಲಿ ಇದುವರೆಗೆ 16 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಡೆಲ್ಲಿ ವೇಗಿ ರಬಾಡ 8.23ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು ಒಟ್ಟು 29 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಮುಂಬೈ ವೇಗಿ ಬೂಮ್ರಾ 14 ಪಂದ್ಯಗಳಿಂದ ಕೇವಲ 6.71 ಸರಾಸರಿಯಲ್ಲಿ ರನ್‌ ನೀಡಿ 27 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮುಂಬೈನ ಟ್ರೆಂಟ್‌ ಬೌಲ್ಟ್‌ (22), ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಯಜುವೇಂದ್ರ ಚಾಹಲ್‌ (21) ಹಾಗೂ ಡೆಲ್ಲಿಯ ಎನ್ರಿಚ್ ನೋಕಿಯೆ (20) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.

ರಬಾಡ, ಬೂಮ್ರಾ, ಬೌಲ್ಟ್‌, ನೋಕಿಯೆ ಈ ಪಂದ್ಯದಲ್ಲಿ ಆಡಲಿದ್ದಾರೆ. ಬೂಮ್ರಾ ಅವರಿಗಿಂತ ರಬಾಡ ಕೇವಲ 2 ವಿಕೆಟ್‌ಗಳ ಅಂತರದಿಂದ ಮುಂದಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ನಿಕಟ ಪೈಪೋಟಿ ಏರ್ಪಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು