ಸೋಮವಾರ, ನವೆಂಬರ್ 23, 2020
22 °C

‘ಆರ್‌ಸಿಬಿಯಿಂದ ಹೊರಬಿದ್ದ ಸ್ಟೋಯಿನಸ್, ಡೆಲ್ಲಿ ಪರ ಹೇಗೆ ಆಡುತ್ತಿದ್ದಾರೆ ನೋಡಿ’

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ದುಬೈ: ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಮಾರ್ಕಸ್‌ ಸ್ಟೋಯಿನಸ್‌ ಅವರನ್ನು ಕೈಬಿಡಲಾಗಿತ್ತು. ಆದರೆ, ಅವರು ಈ ಬಾರಿ ಹೇಗೆ ಆಡುತ್ತಿದ್ದಾರೆ ನೋಡಿ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ಬ್ರಯಾನ್ ಲಾರಾ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ ಪ್ರವೇಶಿಸುವಲ್ಲಿ ಸ್ಟೋಯಿನಸ್‌ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಸ್ಟ್ರೇಲಿಯಾದ ಈ ಆಟಗಾರ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ನಡೆದ ಕ್ವಾಲಿಫೈಯರ್–2 ಪಂದ್ಯದಲ್ಲಿ ಆಲ್ರೌಂಡರ್ ಆಟವಾಡಿದ್ದರು. ಶಿಖರ್‌ ಧವನ್‌ ಜೊತೆ ಇನಿಂಗ್ಸ್‌ ಆರಂಭಿಸಿ 38 ರನ್‌ ಗಳಿಸಿದ್ದ ಅವರು ತಮ್ಮ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಜೊತೆಗೆ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ 26 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು. ಹೀಗಾಗಿ ಡೆಲ್ಲಿ ತಂಡ ಇದೇ ಮೋದಲ ಬಾರಿಗೆ ಫೈನಲ್‌ ಪ್ರವೇಶಿಸಲು ಸಾಧ್ಯವಾಗಿದೆ.

ಸ್ಟೋಯಿನಸ್‌ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಲಾರಾ, ಈ ಆಲ್‌ರೌಂಡರ್‌ ಹೊಂದಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಆರ್‌ಸಿಬಿ ವಿಫಲವಾಗಿತ್ತು ಎಂದಿದ್ದಾರೆ.

‘ಸ್ಟೋಯಿನಸ್‌ ಕಳೆದ ವರ್ಷ ಆರ್‌ಸಿಬಿಯಿಂದ ಹೊರಬಂದರು. ಆದರೆ, ಈ ಬಾರಿ ಡೆಲ್ಲಿ ಪರ ಏನು ಮಾಡುತ್ತಿದ್ದಾರೆ ನೋಡಿ’ ಎಂದು ಕ್ರೀಡಾ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕಳೆದ ಸಲ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಪರ 10 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದ ಮಾರ್ಕಸ್‌, 211 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿಯೂ ಮಿಂಚಲು ವಿಫಲರಾಗಿದ್ದ ಅವರು ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಎರಡದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 16 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 352 ರನ್ ಗಳಿಸಿಕೊಂಡಿದ್ದಾರೆ. ಜೊತೆಗೆ 12 ಪಂದ್ಯಗಳಲ್ಲಿ ಬೌಲಿಂಗ್ ಮಾಡಿ 12 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು