ಬುಧವಾರ, ಅಕ್ಟೋಬರ್ 28, 2020
28 °C

ಧೋನಿ ನಾಯಕತ್ವದಲ್ಲಿ ಆಡಿದ್ದು, ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು: ಸುಂದರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದಲ್ಲಿ ಎಂಎಸ್‌ ಧೋನಿ ಅವರ ನಾಯಕತ್ವದಲ್ಲಿ ಆಡಿದ್ದು, ನಾನು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್‌ ಸುಂದರ್‌ ಹೇಳಿಕೊಂಡಿದ್ದಾರೆ.

ಇಂದು ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ, ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಸೆಣಸಲಿದೆ. ಪಂದ್ಯಕ್ಕೂ ಮುನ್ನ ಮಾತನಾಡಿರುವ ಸುಂದರ್‌, ‘ನಾನು ಮಾಹಿ ಅವರ ನೇತೃತ್ವದಲ್ಲಿ ಆರ್‌ಪಿಎಸ್‌ ತಂಡದಲ್ಲಿ ಆಡಿದ್ದು, ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು. ಆಗಿನಿಂದಲೂ ನಾನು ಬೌಲರ್‌ ಆಗಿ ಸಾಕಷ್ಟು ಕಲಿಯುತ್ತಿದ್ದು, ಹಂತಹಂತವಾಗಿ ಬೆಳೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ ಅವರು, ‘ವಿರಾಟ್‌ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇರಿಸಿರುವುದಕ್ಕೆ ಸಂತೋಷವಾಗುತ್ತದೆ. ಪವರ್‌ ಪ್ಲೇ ಮತ್ತು ಇತರ ಪ್ರಮುಖ ಹಂತದಲ್ಲಿ ನನಗೆ ಚೆಂಡು ನೀಡುತ್ತಾರೆ. ನಾಯಕ ತನ್ನ ಮೇಲೆ ಹೊಂದಿರುವ ವಿಶ್ವಾಸವು ಸ್ಪಿನ್ನರ್‌ಗೆ ತುಂಬಾ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿದ್ದು, 5 ರಲ್ಲಿ ಗೆದ್ದು 2 ಸೋಲು ಕಂಡಿದೆ. ಕೇವಲ 4.90 ಸರಾಸರಿಯಲ್ಲಿ ರನ್‌ ನೀಡಿ 5 ವಿಕೆಟ್‌ಗಳನ್ನು ಪಡೆದುಕೊಂಡಿರುವ ಸುಂದರ್,‌ ಈ ಟೂರ್ನಿಯಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು