IPL 2021: ವಿಲಿಯಮ್ಸನ್ ವಿಕೆಟ್ ಪಡೆದ ಬ್ರಾವೊ 'ಚಾಂಪಿಯನ್'

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ, ಮಗದೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಶಾರ್ಜಾದಲ್ಲಿ ಗುರುವಾರ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಬ್ರಾವೊ, ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.
ಅತ್ತ 11 ರನ್ ಗಳಿಸಿದ ವಿಲಿಯಮ್ಸನ್, ಬ್ರಾವೊ ದಾಳಿಯಲ್ಲಿ ಔಟ್ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
L. B. W! ☝️@DJBravo47 strikes in his first over as @ChennaiIPL pick the second #SRH wicket. 👍 👍
Kane Williamson departs. #VIVOIPL #SRHvCSK
Follow the match 👉 https://t.co/QPrhO4XNVr pic.twitter.com/sO17HHxwJ4
— IndianPremierLeague (@IPL) September 30, 2021
ಡ್ವೇನ್ ಬ್ರಾವೊ 'ಚಾಂಪಿಯನ್' ಹಾಡಿನ ಮೂಲಕ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ವಿಕೆಟ್ ಅಥವಾ ಕ್ಯಾಚ್ ಪಡೆದಾಗ ತಮ್ಮದೇ ಆದ ಚಾಂಪಿಯನ್ ಶೈಲಿಯಲ್ಲಿ ಸ್ಟೆಪ್ ಹಾಕುತ್ತಾ ಸಂಭ್ರಮಿಸುತ್ತಾರೆ.
ಗಾಯದ ಸಮಸ್ಯೆಯಿಂದ ಗುಣಮುಖರಾದ ಬಳಿಕ ಚೆನ್ನೈ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿಕೊಂಡಿರುವ ಬ್ರಾವೊ, ಉತ್ತಮ ಕೊಡುಗೆ ಸಲ್ಲಿಸುತ್ತಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಚೆನ್ನೈ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ಕೇನ್ ವಿಲಿಯಮ್ಸನ್ ಬಳಿಕ ಪ್ರಿಯಂ ಗಾರ್ಗ್ (7) ವಿಕೆಟ್ ಪಡೆಯುವಲ್ಲಿ ಬ್ರಾವೊ ಯಶಸ್ವಿಯಾದರು.
In the air & TAKEN by @msdhoni! 👏 👏
Second wicket for @DJBravo47. 👌 👌#SRH 3 down as Priyam Garg gets out. #VIVOIPL #SRHvCSK @ChennaiIPL
Follow the match 👉 https://t.co/QPrhO4XNVr pic.twitter.com/wwdysPDzr4
— IndianPremierLeague (@IPL) September 30, 2021
DJ Bravo takes big wicket of Kane Williamson for CSK.🔥
(📸 Credit: BCCI/IPL)#DwayneBravo #CSK #KaneWilliamson #CSKvSRH #IPL2021 #CricketTwitter pic.twitter.com/3eXsSQKR1e
— SportsTiger (@sportstigerapp) September 30, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.