ಶುಕ್ರವಾರ, ಮೇ 7, 2021
26 °C

ಐಪಿಎಲ್ ಹರಾಜಿಗೂ ಮೊದಲೇ ಮ್ಯಾಕ್ಸ್‌ವೆಲ್ ಖರೀದಿಗೆ ಆರ್‌ಸಿಬಿ ಮಾಸ್ಟರ್ ಪ್ಲ್ಯಾನ್?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ನಡೆದ ಹರಾಜಿಗೂ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪಷ್ಟ ಯೋಜನೆಯನ್ನು ರೂಪಿಸಿತ್ತು ಎಂಬುದೀಗ ಬಯಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಸಂದರ್ಶನದ ವಿಡಿಯೊದಲ್ಲಿ, ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೇ ನಾಯಕ ವಿರಾಟ್ ಕೊಹ್ಲಿ ಜೊತೆಗೂ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಹಾಗೂ ಟಿ20 ಸರಣಿ ವೇಳೆಯಲ್ಲೇ ನಾಯಕ ವಿರಾಟ್ ಕೊಹ್ಲಿ ಸಂಪರ್ಕದಲ್ಲಿದ್ದರು. ಆರ್‌ಸಿಬಿ ಪರ ಆಲ್‌ರೌಂಡರ್ ಪಾತ್ರ ನಿರ್ವಹಿಸುವ ಬಗ್ಗೆಯೂ ಕೊಹ್ಲಿ ಜೊತೆಗೆ ಸಮಾಲೋಚಿಸಲಾಗಿತ್ತು ಎಂದಿದ್ದಾರೆ.

ನಿಸ್ಸಂಶವಾಗಿಯೂ ಅಲ್ಲಿ ಹರಾಜು ನಡೆಯಲಿದೆ. ಆದರೆ ಅವಕಾಶ ದೊರಕಿದರೆ ಆರ್‌ಸಿಬಿ ಪರ ಆಡುವುದರ ಬಗ್ಗೆ ಚರ್ಚೆ ನಡೆಸಿದ್ದೆವು ಎಂದು ಹೇಳಿದ್ದಾರೆ.

 

 

 

ಬಳಿಕ ಎಲ್ಲವೂ ಯೋಜನೆಯಂತೆ ನಡೆದಿತ್ತು. ಪಂಜಾಬ್ ತಂಡವು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿಗಾಗಿ ಬಿಡುಗಡೆಗೊಳಿಸಿತ್ತು. ತದಾ ಬಳಿಕ ನಡೆದ ಹರಾಜಿನಲ್ಲಿ ಬರೋಬ್ಬರಿ 14.25 ಕೋಟಿ ರೂ.ಗಳಿಗೆ ಆರ್‌ಸಿಬಿ ತಂಡವು ಖರೀದಿಸಿತ್ತು.

 

ತಮ್ಮ ಹೀರೊ ಎಬಿ ಡಿ ವಿಲಿಯರ್ಸ್ ಜೊತೆಗೆ ಆಡಲು ಅವಕಾಶ ದೊರಕುತ್ತಿರುವ ಬಗ್ಗೆಯೂ ಆತೀವ ಉತ್ಸುಕನಾಗಿದ್ದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಏತನ್ಮಧ್ಯೆ ಹರಾಜಿಗೂ ಮೊದಲು ಆಸ್ಟ್ರೇಲಿಯಾದ ತಂಡದ ಸಹ ಆಟಗಾರ ಹಾಗೂ ಬೆಂಗಳೂರು ತಂಡದ ಆ್ಯಡಂ ಜಂಪಾ ಅವರು ಆರ್‌ಸಿಬಿ ತಂಡದ ಕ್ಯಾಪ್ ನೀಡಿರುವುದಾಗಿ ಮ್ಯಾಕ್ಸ್‌ವೆಲ್ ವಿವರಿಸಿದ್ದಾರೆ.

ನಿಜವಾಗಿಯೂ ಅಲ್ಲೊಂದು ತಮಾಷೆಯ ಘಟನೆ ನಡೆದಿತ್ತು. ಹರಾಜಿನ ದಿನ ನ್ಯೂಜಿಲೆಂಡ್‌ನಲ್ಲಿ ರಾತ್ರಿ ಸಮಯವಾಗಿತ್ತು. ಕ್ವಾರಂಟೈನ್‌ನಲ್ಲಿ ನಾವು ತರಬೇತಿ ನಡೆಸುತ್ತಿದ್ದೆವು. ಆ್ಯಡಂ ಜಂಪಾ ತಮ್ಮ ಬ್ಯಾಗ್‌ನೊಳಗಿದ್ದ ಆರ್‌ಸಿಬಿ ಕ್ಯಾಪ್ ಅನ್ನು ನನಗೆ ನೀಡಿ ಫೋಟೊ ತೆಗೆಸಿಕೊಂಡರು. ಬಳಿಕ ಅದನ್ನು ಸಂದೇಶದ ಮೂಲಕ ವಿರಾಟ್‌ಗೆ ಕಳುಹಿಸಿ ಹರಾಜಿನಲ್ಲಿ ನನ್ನನ್ನು ಖರೀದಿಸುವಂತೆ ಸೂಚಿಸಿದರು.

 

 

 

ಅಭಿನಂದನೆಗಳು ನಾನು ಈಗಾಗಲೇ ಮ್ಯಾಕ್ಸ್‌ವೆಲ್‌ಗೆ ಕ್ಯಾಪ್ ನೀಡಿದ್ದೇನೆ ಎಂದು ವಿರಾಟ್ ಅವರಿಗೆ ಜಂಪಾ ಹೇಳಿದ್ದರು. ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ, ನೀವೂ ಮೂರ್ಖರು ಎಂದು ತಮಾಷೆ ಮಾಡಿರುವುದಾಗಿ ಮ್ಯಾಕ್ಸ್‌ವೆಲ್ ವಿವರಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು