ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ವಿಶಿಷ್ಟ ಸಿಕ್ಸರ್ ದಾಖಲೆ ಬರೆದ ಕೀರಾನ್ ಪೊಲಾರ್ಡ್

Last Updated 17 ಏಪ್ರಿಲ್ 2021, 16:08 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕೀರಾನ್ ಪೊಲಾರ್ಡ್, ಅತಿ ದೊಡ್ಡ ಸಿಕ್ಸರ್ ಚಚ್ಚಿದ್ದಾರೆ.

ಅದೇ ಹೊತ್ತಿಗೆ ಐಪಿಎಲ್‌ ಇತಿಹಾಸದಲ್ಲೇ 200 ಸಿಕ್ಸರ್‌ಗಳ ದಾಖಲೆಯನ್ನು ಬರೆದಿದ್ದಾರೆ.

ಶನಿವಾರದಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪೊಲಾರ್ಡ್, 105 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.

ಕೊನೆಯ ಹಂತದಲ್ಲಿ ಕೇವಲ 22 ಎಸೆತಗಳಲ್ಲಿ ಅಜೇಯ 35 ರನ್ ಚಚ್ಚಿದ ಪೊಲಾರ್ಡ್, ತಂಡದ ಮೊತ್ತವನ್ನು 150ರ ಗಡಿ ತಲುಪುವಲ್ಲಿ ನೆರವಾದರು.

ಒಂದು ಹಂತದಲ್ಲಿ ಮುಂಬೈ ಹಿನ್ನೆಡೆ ಅನುಭವಿಸಿತ್ತು. ಆದರೆ ಪೊಲಾರ್ಡ್ ಇನ್ನಿಂಗ್ಸ್ ವ್ಯತ್ಯಾಸಕ್ಕೆ ಕಾರಣವಾಗಿತ್ತು. ಈ ಮೂಲಕ ಮುಂಬೈ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಪೊಲಾರ್ಡ್ ಇನ್ನಿಂಗ್ಸ್‌ನಲ್ಲಿ ಮೂರು ಮನಮೋಹಕ ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಸೇರಿವೆ. ಭುವನೇಶ್ವರ್ ಕುಮಾರ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಪೊಲಾರ್ಡ್ ಸಿಕ್ಸರ್ ಸಿಡಿಸಿದ್ದರು. ಇದರಿಂದಾಗಿ ಭುವಿ ಸಾಕಷ್ಟು ದುಬಾರಿಯೆನಿಸಿದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ಎಂದೆನಿಸಿರುವ ಕೀರಾನ್ ಪೊಲಾರ್ಡ್, ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ಫಾರ್ಮ್‌ಗೆ ಮರಳುವ ಮೂಲಕ ಮುಂಬೈ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪೈಕಿ ಕ್ರಿಸ್ ಗೇಲ್ (351) ಮೊದಲ ಸ್ಥಾನದಲ್ಲಿದ್ದಾರೆ. ಎಬಿ ಡಿ ವಿಲಿಯರ್ಸ್ (237), ರೋಹಿತ್ ಶರ್ಮಾ (217), ಮಹೇಂದ್ರ ಸಿಂಗ್ ಧೋನಿ (216) ಅನುಕ್ರಮವಾಗಿ ನಂತರದ ಸ್ಥಾನಗಳನ್ನು ಆಲಂಕರಿಸಿದ್ದಾರೆ.

201 ಸಿಕ್ಸರ್‌ಗಳನ್ನು ಬಾರಿಸಿರುವ ಪೊಲಾರ್ಡ್ ಈಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಅಷ್ಟೇ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆದರೆ ವಿರಾಟ್‌ಗಿಂತಲೂ (186 ಇನ್ನಿಂಗ್ಸ್) ವೇಗವಾಗಿ ಪೊಲಾರ್ಡ್ 150 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT