ಗುರುವಾರ , ಅಕ್ಟೋಬರ್ 21, 2021
27 °C

PBKS vs RR: ಪಂಜಾಬ್‌ ಗೆಲುವಿಗೆ 185 ರನ್‌ ಗುರಿ ನೀಡಿದ ರಾಜಸ್ಥಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 32ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.

ಪಂಜಾಬ್‌ ಕಿಂಗ್ಸ್‌ ಟಾಸ್‌ ಗೆದ್ದ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಆದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್‌ 20 ಓವರ್‌ಗಳಲ್ಲಿ 185 ರನ್‌ ಗಳಿಸಿ ಆಲೌಟ್ ಆಗಿದೆ.

ರಾಯಲ್ಸ್‌ ಪರ ಆರಂಭಿಕ ಆಟಗಾರರಾದ ಎವಿನ್ ಲೂಯಿಸ್ 36, ಯಶಸ್ವಿ ಜೈಸ್ವಾಲ್ 49 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಬಳಿಕ ಕ್ರೀಸ್‌ಗೆ ಬಂದ ಲಿಯಾಮ್ ಲಿವಿಂಗ್‌ಸ್ಟೋನ್ 25, ಮಹಿಪಾಲ್ ಲೊಮರ್ ಕೇವಲ 17 ಎಸೆತಗಳಲ್ಲಿ 43 ರನ್‌ ಗಳಿಸಿದರು.

ಪಂಜಾಬ್‌ ಪರ ಆರ್ಷದೀಪ್ ಸಿಂಗ್ 5, ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ ಹಾಗೂ ಹರಪ್ರೀತ್ ಬ್ರಾರ್ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು