ಚೆನ್ನೈ: ವಿರಾಟ್ ಕೊಹ್ಲಿ ಅದ್ಭುತ ಫೀಲ್ಡಿಂಗ್ ನೆರವಿನಿಂದ ರೋಹಿತ್ ಶರ್ಮಾ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು.

ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ರಿಸ್ ಲಿನ್ ಉತ್ತಮವಾದ ಆರಂಭವೊದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 24 ರನ್ ಪೇರಿಸಿದ್ದರು.

ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಒಂದು ರನ್ ಕಬಳಿಸುವ ಪ್ರಯತ್ನದಲ್ಲಿ ರನೌಟ್ ಆದರು. ಶರವೇಗದಲ್ಲಿ ಓಡಿ ಬಂದ ಕೊಹ್ಲಿ ಚೆಂಡನ್ನು ಬೌಲರ್ ಯಜುವೇಂದ್ರ ಚಾಹಲ್‌ಗೆ ಥ್ರೋ ಮಾಡುವ ಮೂಲಕ, ರೋಹಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ವಿಕೆಟ್ ಮಧ್ಯೆ ರನ್ ಕಬಳಿಸುವದರಲ್ಲಿ ರೋಹಿತ್ ಶರ್ಮಾ ಚುರುಕಾಗಿಲ್ಲ ಎಂಬ ಆಪಾದನೆ ಈ ಹಿಂದೆಯೂ ಕೇಳಿಬಂದಿತ್ತು. ಈಗ ಮಗದೊಮ್ಮೆ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.