IPL 2021: ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಮುಂಬೈ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿನ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಸೇರಿದಂತೆ ಎಲ್ಲ ಎಂಟು ತಂಡಗಳು ತನ್ನ 'ಹೋಮ್' ಹಾಗೂ 'ಅವೇ' ಪಂದ್ಯಗಳನ್ನು ತಣಸ್ಥ ತಾಣಗಳಲ್ಲಿ ಆಡಲಿವೆ.
ಇದರಿಂದಾಗಿ ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ. ಆರಂಭಿಕ ಹಂತದಲ್ಲಿ ಟೂರ್ನಿಯು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು, ಮುಂದಿನ ಹಂತದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರೇಕ್ಷಕರಿಗೆ ಅನುಮತಿ ನೀಡಬೇಕೇ ಎಂಬುದರ ಕುರಿತು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಲಿದೆ.
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ ವಿಶೇಷತೆಗಳ ಮಾಹಿತಿ ಇಲ್ಲಿದೆ
ಲೀಗ್ ಹಂತದ ಎಲ್ಲ 14 ಪಂದ್ಯಗಳನ್ನು ಬೆಂಗಳೂರು ತಂಡವು ಚೆನ್ನೈ, ಮುಂಬೈ, ಅಹಮದಾಬಾದ್ ಹಾಗೂ ಕೋಲ್ಕತ್ತ ನಗರಗಳಲ್ಲಿ ಆಡಲಿವೆ.
The moment we've all been waiting for! The fixtures for #IPL2021 are out! 🤩
Which RCB game are you looking forward to the most, 12th Man Army?🤔#PlayBold #WeAreChallengers pic.twitter.com/WXj353JQqc
— Royal Challengers Bangalore (@RCBTweets) March 7, 2021
ಏಪ್ರಿಲ್ 9ರಂದು ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ ಬಳಗವು, ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಹಾಗಿದ್ದರೆ ತಡವೇಕೆ? ಆರ್ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.
ಇದನ್ನೂ ಓದಿ: IPL 2021: ಎಲ್ಲ ಎಂಟು ತಂಡಗಳ ಸಂಪೂರ್ಣ ವೇಳಾಪಟ್ಟಿ ಇಂತಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ ಇಂತಿದೆ:
ಆರ್ಸಿಬಿ vs ಮುಂಬೈ, ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಹೈದರಾಬಾದ್, ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಕೋಲ್ಕತ್ತ, ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ vs ರಾಜಸ್ಥಾನ, ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಚೆನ್ನೈ, ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ vs ಡೆಲ್ಲಿ, ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಪಂಜಾಬ್, ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಕೋಲ್ಕತ್ತ, ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಪಂಜಾಬ್, ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಹೈದರಾಬಾದ್, ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಡೆಲ್ಲಿ, ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ರಾಜಸ್ಥಾನ, ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ
ಆರ್ಸಿಬಿ vs ಮುಂಬೈ, ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್ಸಿಬಿ vs ಚೆನ್ನೈ, ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.