ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 3,000 ರನ್ಗಳ ಮೈಲಿಗಲ್ಲು ಕ್ರಮಿಸಿದ್ದಾರೆ.

ದುಬೈಯಲ್ಲಿ ಸೋಮವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಬಾರಿಸಿದ ಸಂಜು, ಐಪಿಎಲ್ನಲ್ಲಿ 3,000 ರನ್ಗಳ ವಿಶಿಷ್ಟ ಮೈಲಿಗಲ್ಲು ತಲುಪಿದರು.

ಇದನ್ನೂ ಓದಿ:IPL 2021 LIVE | SRH vs RR: ಸಂಜು 82; ರಾಜಸ್ಥಾನ್ 164/5 Live

ಇದರೊಂದಿಗೆ ಐಪಿಎಲ್ನಲ್ಲಿ 3,000 ರನ್ ಗಳಿಸಿದ 19ನೇ ಬ್ಯಾಟ್ಸ್ಮನ್ ಎನಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಕೆ.ಎಲ್. ರಾಹುಲ್ ಇದೇ ಸಾಧನೆ ಮಾಡಿದ್ದರು.

ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದು, ಒಟ್ಟು 6,185 ರನ್ ಗಳಿಸಿದ್ದಾರೆ.

ಆಕರ್ಷಕ ಅರ್ಧಶತಕ ಬಾರಿಸಿದ ಸಂಜು, ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಇದುವರೆಗೆ ಒಟ್ಟು 433 ರನ್ ಕಲೆ ಹಾಕಿದ್ದಾರೆ. ಈ ಮೂಲಕ 'ಆರೆಂಜ್ ಕ್ಯಾಪ್'ಗೆ ಅರ್ಹರಾದರು.

57 ಎಸೆತಗಳನ್ನು ಎದುರಿಸಿದ ಸಂಜು, ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಇದು ಐಪಿಎಲ್ನಲ್ಲಿ ಸಂಜು ಬ್ಯಾಟ್ನಿಂದ ಸಿಡಿದ 15ನೇ ಅರ್ಧಶತಕವಾಗಿದೆ.

ಸಂಜು ಸ್ಯಾಮ್ಸನ್ ಐಪಿಎಲ್ ಅಂಕಿಅಂಶ ಇಂತಿದೆ:
ಪಂದ್ಯ: 117
ಅಜೇಯ: 12
ರನ್: 3,017
ಗರಿಷ್ಠ: 119
ಸರಾಸರಿ: 29.87
ಸ್ಟ್ರೈಕ್ರೇಟ್: 134.86
ಶತಕ: 3
ಅರ್ಧಶತಕ: 15
ಬೌಂಡರಿ: 232
ಸಿಕ್ಸರ್: 130
ಕ್ಯಾಚ್: 58
ಸ್ಟಂಪಿಂಗ್: 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.