ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಕೊಹ್ಲಿ-ರೋಹಿತ್ ವಿರುದ್ಧದ ಪೈಪೋಟಿ ಇಷ್ಟಪಡುತ್ತೇನೆ: ಅಶ್ವಿನ್

Last Updated 1 ಏಪ್ರಿಲ್ 2022, 15:26 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ತಮ್ಮ ಸಹ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿರುದ್ಧದ ಪೈಪೋಟಿ ಇಷ್ಟಪಡುತ್ತೇನೆ ಎಂದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.

ಐಪಿಎಲ್ 15ನೇ ಆವೃತ್ತಿಯಲ್ಲಿ ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಪಡೆಯುವುದು ವಿಶ್ವದ ಯಾವುದೇ ಬೌಲರ್‌ ಪಾಲಿಗೆ ಕನಸಾಗಿದೆ. ಅದೇ ರೀತಿ ಅಶ್ವಿನ್ ಕೂಡ ಕೊಹ್ಲಿ ಹಾಗೂ ರೋಹಿತ್ ವಿರುದ್ಧದ ಸ್ಪರ್ಧೆಯನ್ನು ಇಷ್ಟಪಡುತ್ತಾರೆ.

ಈ ಕುರಿತು 'ಇಸ್‌ಪಿಎನ್ ಕ್ರಿಕ್‌ಇನ್ಫೋ'ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

'ನಿಜ ಹೇಳಬೇಕೆಂದರೆ ವಿರಾಟ್ ಹಾಗೂ ರೋಹಿತ್ ವಿರುದ್ಧದ ಪೈಪೋಟಿ ಇಷ್ಟಪಡುತ್ತೇನೆ. ಅವರು ಡ್ರೆಸ್ಸಿಂಗ್ ಕೊಠಡಿಯಲ್ಲಿ ನನ್ನ ಜೊತೆಯಿದ್ದ ಇಬ್ಬರು ಗುಣಮಟ್ಟದ ಬ್ಯಾಟರ್‌ಗಳಾಗಿದ್ದಾರೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ವಿರುದ್ಧ ಸ್ಪರ್ಧಿಸಿಲ್ಲ. ಈ ಸವಾಲನ್ನು ಇಷ್ಟಪಡುತ್ತೇನೆ. ಅವರು ತಂಡದೊಳಗಿನ ಬೌಲರ್‌ಗಳಿಗೆ ಔಟ್ ಆಗಲು ಅವರು ಇಷ್ಟಪಡುವುದಿಲ್ಲ. ಹಾಗಾಗಿ ಈ ಸ್ಪರ್ಧೆಯನ್ನು ಆನಂದಿಸುತ್ತೇನೆ. ಪ್ರತಿ ವರ್ಷವೂ ಇದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕೊಹ್ಲಿಯನ್ನು ಒಂದು ಹಾಗೂ ರೋಹಿತ್ ಅವರನ್ನು ಎರಡು ಬಾರಿ ಅಶ್ವಿನ್ ಔಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT