ಬುಧವಾರ, ಮಾರ್ಚ್ 29, 2023
24 °C

IPL 2023: ಅಭ್ಯಾಸ ಆರಂಭಿಸಿದ ಕ್ಯಾಪ್ಟನ್ ಕೂಲ್, ಸಿಕ್ಸರ್‌ಗೆ ಅಭಿಮಾನಿಗಳು ಫಿದಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲಿಂಗ್‌ (ಐಪಿಎಲ್‌) 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ‘ಕ್ಯಾಷ್ಟನ್ ಕೂಲ್’ ಖ್ಯಾತಿಯ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌.ಧೋನಿ ಅಭ್ಯಾಸ ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ. 

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಧೋನಿ, ಹಲವು ದಿನಗಳಿಂದ ಆಟದಿಂದ ದೂರ ಉಳಿದಿದ್ದರು. ಇದೀಗ ಐಪಿಎಲ್‌ ಟೂರ್ನಿಗೆ ಸಜ್ಜಾಗಿರುವ ಅವರು ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

ಧೋನಿ ಅಭ್ಯಾಸದ ವೇಳೆ ಸತತ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಬಾರಿಯೂ ಧೋನಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕೆ.ಎಸ್. ವಿಶ್ವನಾಥನ್ ಖಚಿತಪಡಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು 2010, 2011, 2018 ಹಾಗೂ 2021ನೇ ಸಾಲಿನಲ್ಲಿ ಐಪಿಎಲ್ ಟ್ರೋಫಿ ಜಯಿಸಿತ್ತು. ಅಲ್ಲದೆ 2010 ಹಾಗೂ 2014ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ಕೂಡ ಗೆದ್ದಿತ್ತು.

ಇವನ್ನೂ ಓದಿ...

 ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ: ಬಾಲಿವುಡ್ ತಾರೆಯರ ಸಮಾಗಮ

ಇ–ಮೇಲ್ ಕಳುಹಿಸಿ 380 ಉದ್ಯೋಗಿಗಳನ್ನು ವಜಾಗೊಳಿಸಿದ ‘ಸ್ವಿಗ್ಗಿ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು