ಬೆಂಗಳೂರು: 2023ರ ಐಪಿಎಲ್ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಟಾಸ್ ಬಳಿಕವೂ ಪ್ಲೇಯಿಂಗ್ XI ಬದಲಾಯಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಹೊಸ ನಿಯಮದ ಅನುಸಾರ, ಟಾಸ್ ಬಳಿಕ ತಂಡಗಳ ಕಪ್ತಾನರು ಆಡುವ XI ರ ಬಳಗ ಹಾಗೂ 5 ಬದಲಿ ಆಟಗಾರರನ್ನು ಮ್ಯಾಚ್ ರೆಫರಿಗೆ ಬರವಣಿಗೆ ಮೂಲಕ ನೀಡಬೇಕು. ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದ ಕ್ಯಾಪ್ಟನ್ ಗಮನಕ್ಕೆ ತಾರದೆ ಈಗಾಗಲೇ ನೀಡಿರುವ ಆಡುವ ಬಳಗದ XI ರಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
ಹೊಸ ನಿಯಮದ ಪ್ರಕಾರ ಒಂದು ವೇಳೆ ಟಾಸ್ ಬಳಿಕ, ಆಡುವ XIರ ಬಳಗವನ್ನು ಬದಲಾವಣೆ ಮಾಡಬೇಕೆಂದು ಅನಿಸಿದರೆ, ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮ್ಯಾಚ್ ರೆಫರಿಗೆ ತಿಳಿಸುವ ಮೂಲಕ ಬದಲಾವಣೆ ಮಾಡಬಹುದು.
ಈವೆರೆಗೆ ಟಾಸ್ ಬಳಿಕ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡುವ ಅವಕಾಶ ಇರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.