ಜೈಪುರ: ಇಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 12 ರನ್‌ಗಳ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ ತಂಡ ರಿಯಾನ್ ಪರಾಗ್ ಅವರ ಅಜೇಯ 84 ರನ್ ನೆರವಿನಿಂದ 185 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು. ಅಶ್ವಿನ್ 29 ಮತ್ತು ಧ್ರುವ್ ಜುರೇಲ್ 20 ರನ್ ಸಿಡಿಸುವ ಮೂಲಕ ತಂಡಕ್ಕೆ ನೆರವಾದರು.

186 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೇವಿಡ್ ವಾರ್ನರ್ 49 ಮತ್ತು ಟ್ರೈಸ್ಟನ್ ಸ್ಟಬ್ಸ್ ಅಜೇಯ 44 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.

ರಾಜಸ್ಥಾನ ತಂಡದ ವೇಗಿ ನಾಂದ್ರೆ ಬರ್ಗರ್ (29ಕ್ಕೆ2), ಸ್ಪಿನ್ನರ್ ಯಜುವೇಂದ್ರ ಚಾಹಲ್ (19ಕ್ಕೆ2) ಮತ್ತು ಆವೇಶ್ ಖಾನ್ (29ಕ್ಕೆ1) ಉತ್ತಮ ಬೌಲಿಂಗ್ ಮಾಡಿ ಡೆಲ್ಲಿ ತಂಡವನ್ನು ತಡೆದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಡೆಲ್ಲಿ ತಂಡಕ್ಕೆ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ (ಔಟಾಗದೆ 44) ಇದ್ದರು. ಆವೇಶ್ ಖಾನ್ ಅವರು ಈ ಓವರ್‌ನಲ್ಲಿ ಕೇವಲ ನಾಲ್ಕು ರನ್ ಮಾತ್ರ ಕೊಟ್ಟರು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 185 (ರಿಯಾನ್ ಪರಾಗ್ ಔಟಾಗದೆ 84, ಅಶ್ವಿನ್ 29, ಧ್ರುವ ಜುರೇಲ್ 20, ಹೆಟ್ಮೆಯರ್ ಔಟಾಗದೆ 14, ಖಲೀಲ್ ಅಹಮದ್ 24ಕ್ಕೆ1)

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 173 (ಡೇವಿಡ್ ವಾರ್ನರ್ 49, ಮಿಚೆಲ್ ಮಾರ್ಷ್ 23, ರಿಷಭ್ ಪಂತ್ 28, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 44, ಅಕ್ಷರ್ ಪಟೇಲ್ ಔಟಾಗದೆ 15, ನಾಂದ್ರೆ ಬರ್ಗರ್ 29ಕ್ಕೆ2, ಯಜುವೇಂದ್ರ ಚಾಹಲ್ 19ಕ್ಕೆ2, ಆವೇಶ್ ಖಾನ್ 29ಕ್ಕೆ1)

ಫಲಿತಾಂಶ: ರಾಜಸ್ಥಾನ ರಾಯಲ್ಸ್ 12 ರನ್‌ಗಳ ಜಯ. ಪಂದ್ಯಶ್ರೇಷ್ಠ: ರಿಯಾನ್ ಪರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.