ಮೈಸೂರು: ಐಪಿಎಲ್–2025ರ ಚಾಂಪಿಯನ್ ಕಪ್ ಹಿಡಿದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಆಟಗಾರರ ಸವಾರಿ ಮೈಸೂರಿನ ‘ಅಂಬಾರಿ’ ಮೇಲೆ ನಡೆಯಲಿದೆ.

ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರ ಮೆರವಣಿಗೆಯು ಬುಧವಾರ ಸಂಜೆ ನಡೆಯಲಿದ್ದು, ಮೈಸೂರಿನ ದಸರಾ ಆಕರ್ಷಣೆಯಾದ ‘ಅಂಬಾರಿ’ ಬಸ್ ಬಳಕೆಯಾಗಲಿದೆ.
.IPL 2025 | ಬೆಂಗಳೂರಿನಲ್ಲಿ ಆರ್ಸಿಬಿ ವಿಕ್ಟರಿ ಪರೇಡ್: ಮಾಹಿತಿ ಇಲ್ಲಿದೆ.
ಆರ್ಸಿಬಿ ತಂಡದ ವ್ಯವಸ್ಥಾಪಕರು ಪ್ರವಾಸೋದ್ಯಮ ಇಲಾಖೆಯ ‘ಅಂಬಾರಿ’ ಬಸ್ ಅನ್ನು ಕೇಳಿದ್ದು, ಮಂಗಳವಾರ ಬೆಂಗಳೂರು ತಲುಪಿದೆ. ಸಂಭ್ರಮ ಮುಗಿಲು ಮುಟ್ಟಿರುವಾಗಲೇ, ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಇಲಾಖೆಯು ಆರಂಭಿಸಿದ ತೆರೆದ ಬಸ್ನಲ್ಲಿ ನೆಚ್ಚಿನ ಆಟಗಾರರು ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಪುಳಕ ಉಂಟುಮಾಡಲಿದೆ.

ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಮೈಸೂರಿಗೆ 2021ರಲ್ಲಿ 3 ಡಬಲ್ ಡೆಕ್ಕರ್ ಬಸ್ ‘ಅಂಬಾರಿ'ಯನ್ನು ನೀಡಿತ್ತು. ಪ್ರವಾಸಿಗರು ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ದಸರೆ ವೇಳೆ ಈ ಬಸ್ಗೆ ಭಾರಿ ಬೇಡಿಕೆಯೂ ಇದೆ.
.IPL 2025 FINAL |RCB v PBKS: ಈ ಸಲ ಕಪ್ ಆರ್ಸಿಬಿಗೆ; ಐಪಿಎಲ್ಗೆ ಹೊಸ ‘ಕಿಂಗ್’.IPL 2025: ಫೈನಲ್ ಗೆದ್ದ RCB; ಯಾರಿಗೆ ಯಾವ ಪ್ರಶಸ್ತಿ? ಬಹುಮಾನದ ಮೊತ್ತ ಎಷ್ಟು?.IPL 2025 FINAL |RCB vs PBKS: ಯುವಜನತೆಯ ಸಂಭ್ರಮ ಇಮ್ಮಡಿಸಿದ ಬೆಂಗಳೂರು ಗೆಲುವು.RCB vs PBKS: ಆರ್ಸಿಬಿಗೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.