‘ಅಭಿಮಾನಿಗಳ ಗೆಲುವು’
‘ಇದು ತಂಡಕ್ಕೆ ದಕ್ಕಿದ ಗೆಲುವು ಮಾತ್ರವಲ್ಲ, ಆರ್‌ಸಿಬಿ ಅಭಿಮಾನಿಗಳ ಗೆಲುವು ಕೂಡ. ಇದು 18 ದೀರ್ಘ ವರ್ಷಗಳ ಕಾಯುವಿಕೆ. ಈ ಅವಧಿಯಲ್ಲಿ ನನ್ನ ಯೌವನ, ಮೇರು ಮಟ್ಟದ ಆಟ, ಅನುಭವ ಧಾರೆ ಎರೆದಿದ್ದೇನೆ. ಪ್ರತಿ ವರ್ಷ ಗೆಲುವಿಗೆ ನನ್ನಿಂದ ಏನೆಲ್ಲಾ ಸಾಧ್ಯವೊ ಎಲ್ಲವನ್ನೂ ಕೊಟ್ಟಿದ್ದೇನೆ. ಕೊನೆಗೂ ಗೆದ್ದಿರುವುದು ನಂಬಲಸಾಧ್ಯವಾದ ಅನುಭವ. ಇಂಥ ಸುದಿನವನ್ನು ನಿರೀಕ್ಷಿಸಿರಲಿಲ್ಲ. ಪಂದ್ಯದ ಕೊನೆಯ ಎಸೆತ ಬೌಲಿಂಗ್ ವೇಳೆಯೂ ಭಾವನೆಗಳನ್ನು ತಡೆದುಕೊಂಡೆ’. ‘ಈ ಫ್ರಾಂಚೈಸಿಗೆ ಎಬಿಡಿ ವಿಲಿಯರ್ಸ್ ಅವರು ನೀಡಿರುವ ಕಾಣಿಕೆ ಅಮೋಘವಾದುದು. ಅವರಿಗೆ ಹೇಳಿದ್ದೆ. ‘ಇದು ನಮ್ಮ ಗೆಲುವು ಮಾತ್ರವಲ್ಲ. ನಿಮ್ಮದೂ ಸಹ. ನಮ್ಮ ಜೊತೆ ನೀವೂ ಸಂಭ್ರಮ ಅಚರಿಸಬೇಕೆಂದು ಹೇಳಿದ್ದೆ. ಅವರು ನಾಲ್ಕು ವರ್ಷ ಹಿಂದೆಯೇ ನಿವೃತ್ತರಾದರೂ ನಮ್ಮ ತಂಡದ ಪರ ಅತಿ ಹೆಚ್ಚು ‘ಪಂದ್ಯದ ಆಟಗಾರ’ ಗೌರವ ಪಡೆದಿದ್ದಾರೆ. ಇದು ಅವರು ತಂಡದ ಮೇಲಿನ ಬೀರಿರುವ ಪ್ರಭಾವ ಎಷ್ಟರ ಮಟ್ಟಿನದ್ದು ಎಂದು ತೋರಿಸುತ್ತದೆ’. –ವಿರಾಟ್ ಕೊಹ್ಲಿ