ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಟೂರ್ನಿಯಲ್ಲಿ ಪ್ರತಿ ಓವರ್ಗೆ 9.62ರ ಸರಾಸರಿಯಲ್ಲಿ ಬರೋಬ್ಬರಿ 26,381 ರನ್ಗಳು ಹರಿದವು. 2,245 ಬೌಂಡರಿ, 1,294 ಸಿಕ್ಸ್ ಸಿಡಿದವು. ಒಟ್ಟು 52 ಇನಿಂಗ್ಸ್ಗಳಲ್ಲಿ 200ಕ್ಕಿಂತ ಹೆಚ್ಚು ಮೊತ್ತ ದಾಖಲಾಯಿತು. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಇವೆಲ್ಲವೂ ದಾಖಲೆಯೇ.

ಪಂಜಾಬ್ ಕಿಂಗ್ಸ್ ವಿರುದ್ಧ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಫೈನಲ್ನಲ್ಲಿ ಅಮೋಘ ಪ್ರದರ್ಶನ (17 ರನ್ಗೆ 2 ವಿಕೆಟ್) ತೋರಿದ ಕೃಣಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಟೂರ್ನಿಯುದ್ದಕ್ಕೂ ಗಮನಾರ್ಹ ಆಟವಾಡಿದ ಮುಂಬೈ ಇಂಡಿಯನ್ಸ್ನ ಸೂರ್ಯಕುಮಾರ್ ಯಾದವ್ ಅವರು 'ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್' ಎನಿಸಿಕೊಂಡರು. ಅವರು ಈ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕನಿಷ್ಠ 25 ರನ್ ಗಳಿಸಿದ್ದಾರೆ ಎಂಬುದು ವಿಶೇಷ.
.IPL 2025 FINAL |RCB v PBKS: ಈ ಸಲ ಕಪ್ ಆರ್ಸಿಬಿಗೆ; ಐಪಿಎಲ್ಗೆ ಹೊಸ ‘ಕಿಂಗ್’.ಆರ್ಸಿಬಿಗೆ ಕಪ್: ಹಲವು ದಾಖಲೆಗಳಿಗೆ ಸಾಕ್ಷಿಯಾದ 'ಫೈನಲ್' ಹೈಲೈಟ್ಸ್ ಇಲ್ಲಿದೆ.
ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದಕ್ಕೆ ಸಾಯಿ ಸುದರ್ಶನ್ (759 ರನ್), ಹೆಚ್ಚು ವಿಕೆಟ್ ಪಡೆದದ್ದಕ್ಕೆ ಪ್ರಸಿದ್ಧ ಕೃಷ್ಣ (25 ವಿಕೆಟ್) ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಡೆದರು. ಇವರಿಬ್ಬರೂ ಗುಜರಾತ್ ಟೈಟನ್ಸ್ ಆಟಗಾರರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೇವಿಡ್ ಬ್ರೇವಿಸ್ ಅವರು ಲಾಂಗ್ ಆಫ್ನತ್ತ ಬಾರಿಸಿದ ಚೆಂಡನ್ನು ಓಡಿ ಬಂದು ಎಡಕ್ಕೆ ಜಿಗಿದು ಹಿಡಿದು ಅಭಿಮಾನಿಗಳ ಹುಬ್ಬೇರಿಸಿದ್ದ ಸನ್ರೈಸರ್ಸ್ ಹೈದರಾಬಾದ್ನ ಕಮಿಂದು ಮೆಂಡಿಸ್ಗೆ 'ಕ್ಯಾಚ್ ಆಫ್ ದಿ ಸೀಸನ್' ಪ್ರಶಸ್ತಿ ಲಭಿಸಿತು.

ಯಾರಿಗೆ ಯಾವ ಪ್ರಶಸ್ತಿ? ಪಟ್ಟಿ ಇಲ್ಲಿದೆ

ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹ 20 ಕೋಟಿ

ರನ್ನರ್ಸ್ ಅಪ್: ಪಂಜಾಬ್ ಕಿಂಗ್ಸ್ – ₹ 12.5 ಕೋಟಿ

ಆರೆಂಜ್ ಕ್ಯಾಪ್: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್) – ₹ 10 ಲಕ್ಷ

ಪರ್ಪಲ್ ಕ್ಯಾಪ್: ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟನ್ಸ್) – ₹ 10 ಲಕ್ಷ

ಉದಯೋನ್ಮುಖ ಆಟಗಾರ: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್) – ₹ 10 ಲಕ್ಷ

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್) – ₹ 10 ಲಕ್ಷ + Tata Curvv

ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್: ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್) – ₹ 15 ಲಕ್ಷ

ಅತಿ ಹೆಚ್ಚು ಸಿಕ್ಸ್: ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್) – ₹ 10 ಲಕ್ಷ

ಅತಿ ಹೆಚ್ಚು ಬೌಂಡರಿ: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್) – ₹ 10 ಲಕ್ಷ

ಹೆಚ್ಚು ಡಾಟ್ ಬಾಲ್: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟನ್ಸ್) – ₹ 10 ಲಕ್ಷ

ಕ್ಯಾಚ್ ಆಫ್ ದಿ ಸೀಸನ್: ಕಮಿಂದು ಮೆಂಡಿಸ್ (ಸನ್ರೈಸರ್ಸ್ ಹೈದರಾಬಾದ್) – ₹ 10 ಲಕ್ಷ

ಫೇರ್ ಪ್ಲೇ ಅವಾರ್ಡ್: ಚೆನ್ನೈ ಸೂಪರ್ ಕಿಂಗ್ಸ್ – ₹ 10 ಲಕ್ಷ

ಪಿಚ್ ಹಾಗೂ ಕ್ರೀಡಾಂಗಣ: ದೆಹಲಿ & ಕ್ರಿಕೆಟ್ ಅಸೋಸಿಷೇನ್ (ಡಿಡಿಸಿಎ) – ₹ 50 ಲಕ್ಷ

ಫೈನಲ್ ಪಂದ್ಯದ ಪ್ರಶಸ್ತಿಗಳು

ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – ₹ 5 ಲಕ್ಷ

ಸೂಪರ್ ಸ್ಟ್ರೈಕರ್: ಜಿತೇಶ್ ಶರ್ಮಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – ₹ 1 ಲಕ್ಷ

ಹೆಚ್ಚು ಡಾಟ್ ಬಾಲ್: ಕೃಣಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – ₹ 5 ಲಕ್ಷ

ಅತಿ ಹೆಚ್ಚು ಸಿಕ್ಸ್: ಶಶಾಂಕ್ ಸಿಂಗ್ (ಪಂಜಾಬ್ ಕಿಂಗ್ಸ್) – ₹ 1 ಲಕ್ಷ

ಅತಿ ಹೆಚ್ಚು ಬೌಂಡರಿ: ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್) – ₹ 1 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.