ಒಂದು ವಾರದ ನಂತರ ಐಪಿಎಲ್ ಪುನರಾರಂಭ ಇಂದು | ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮೇಲೆ ನಿರೀಕ್ಷೆ | ರಜತ್ ಪಾಟೀದಾರ್ ಕಣಕ್ಕಿಳಿಯುವ ಭರವಸೆ
IPL–2025 | ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ RCB ಹಾಗೂ KKR ಇದೀಗ ಪುನರಾರಂಭದ ಪಂದ್ಯದಲ್ಲೂ ಸೆಣಸಾಟಕ್ಕೆ ಸಜ್ಜಾಗಿವೆ. ಪ್ಲೇ ಆಫ್ಗೇರುವ ನಿಟ್ಟಿನಲ್ಲಿ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಗೆಲುವು ಯಾರಿಗೆ?#IPL2025#Cricket#ViratKohli#T20Cricket#RCBvsKKR
ಒಂದು ವಾರ ಬಿಡುವಿನ ನಂತರ ಮತ್ತೆ ಐಪಿಎಲ್ ಶುರುವಾಗುವ ಭರವಸೆ ನಮಗಿತ್ತು. ಆದ್ದರಿಂದ ತರಬೇತಿಯನ್ನು ನಿಲ್ಲಿಸಿರಲಿಲ್ಲ. ಸೋಲು ಗೆಲುವುಗಳು ಆಟದಲ್ಲಿ ಸಾಮಾನ್ಯ ಸಂಗತಿ. ಆದರೆ ಪ್ರತಿ ಪಂದ್ಯದಲ್ಲಿ ಜಯಿಸುವ ಉತ್ಸಾಹದಿಂದಲೇ ಆಡುತ್ತೇವೆ
ಮನೀಷ್ ಪಾಂಡೆ ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರ
ಇಂದು ಮಳೆ ಸಾಧ್ಯತೆ
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಶನಿವಾರ ಪಂದ್ಯ ನಡೆಯುವ ಸಂದರ್ಭದಲ್ಲಿಯೂ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ.