ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ ಮಗದೊಂದು ಅರ್ಧಶತಕದ ಸಾಧನೆ ಮಾಡಿದ್ದಾರೆ.

ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಲ 50ಕ್ಕೂ ಹೆಚ್ಚು ರನ್ ಗಳಿಸಿದ (ಶತಕ ಸೇರಿದಂತೆ) ಬ್ಯಾಟರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯನ್ನು ವಿರಾಟ್ ಮುರಿದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಇಂದು ಚಂಡೀಗಡದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಆಕರ್ಷಕ ಅರ್ಧಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಇದು ಐಪಿಎಲ್ನಲ್ಲಿ ವಿರಾಟ್ ಅವರ 59ನೇ ಅರ್ಧಶತಕದ ಸಾಧನೆಯಾಗಿದೆ. ಹಾಗೆಯೇ ಎಂಟು ಶತಕಗಳನ್ನು ಹೊಂದಿದ್ದಾರೆ. ಆ ಮೂಲಕ ಒಟ್ಟು 67ನೇ ಸಲ 50ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ.

54 ಎಸೆತಗಳನ್ನು ಎದುರಿಸಿದ ವಿರಾಟ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಔಟಾಗದೆ ಉಳಿದರು.

ಐಪಿಎಲ್ನಲ್ಲಿ ಅತಿ ಹೆಚ್ಚು 50+ ರನ್ ಸಾಧನೆ (ಶತಕ ಸೇರಿದಂತೆ):

ವಿರಾಟ್ ಕೊಹ್ಲಿ: 67 (8 ಶತಕ)

ಡೇವಿಡ್ ವಾರ್ನರ್: 66 (4 ಶತಕ)

ಶಿಖರ್ ಧವನ್: 53 (2 ಶತಕ)

ರೋಹಿತ್ ಶರ್ಮಾ: 45 (2 ಶತಕ)

ಕೆ.ಎಲ್. ರಾಹುಲ್: 43 (4 ಶತಕ)

ಎಬಿ ಡಿವಿಲಿಯರ್ಸ್: 43 (3 ಶತಕ)

.IPL 2025: ಕೊಹ್ಲಿ-ಪಡಿಕ್ಕಲ್ ಆಟ; ಪಂಜಾಬ್ ವಿರುದ್ಧ ಜಯ, ಸೇಡು ತೀರಿಸಿಕೊಂಡ RCB.IPL 2025 | ಮುಂಬೈಗೆ ಹ್ಯಾಟ್ರಿಕ್ ಗೆಲುವು: ಚೆನ್ನೈಗೆ ಆರನೇ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.