ಗುರುವಾರ , ಜನವರಿ 28, 2021
15 °C

ಗೂಗಲ್‌ ಶೋಧ: ಕೊರೊನಾಕ್ಕಿಂತ ಐಪಿಎಲ್ ಮುಂದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟದ ವಿಷಯ ಏನಿರಬಹುದು?

2020ರಲ್ಲಿ ಕೊರೊನಾ ಬಿಟ್ಟರೆ ಇನ್ನೇನಿದೆ  ಎನ್ನುವುದಾದರೆ ಅದು ತಪ್ಪು. ಏಕೆಂದರೆ, ಈ ವರ್ಷ ಗೂಗಲ್‌ನಲ್ಲಿ ಭಾರತದ ಜನರು ಅತಿ ಹೆಚ್ಚು ಹುಡುಕಾಟ (ಸರ್ಚ್) ನಡೆದಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಬಗ್ಗೆ!

‘ಗೂಗಲ್ ಇಂಡಿಯಾ’ವು 2020ರ ‘ವರ್ಷದ ಹುಡುಕಾಟದ ಬಗ್ಗೆ ಮಾಹಿತಿ ನೀಡಿದ್ದು ಐಪಿಎಲ್ ಅಗ್ರಸ್ಥಾನದಲ್ಲಿದೆ.  ಕಳೆದ ವರ್ಷ ‘ಐಸಿಸಿ ಕ್ರಿಕೆಟ್ ವರ್ಲ್ಡ್‌ ಕಪ್’ ಟಾಪ್ ಟ್ರೆಂಡಿಂಗ್ ಆಗಿತ್ತು.

ಈ ವರ್ಷ ಕ್ರೀಡಾ ವಿಭಾಗದಲ್ಲಿ ಅತಿಹೆಚ್ಚು ಸರ್ಚ್‌ ಮಾಡಲಾದ ವಿಷಯವೂ ಐಪಿಎಲ್‌ ಆಗಿದೆ. ಒಟ್ಟಾರೆ ಅತಿಹೆಚ್ಚು ಸರ್ಚ್ ಆಗಿರುವ ವಿಷಯಗಳ ಸಾಲಿನಲ್ಲಿ ‘ಕೊರೊನಾ ವೈರಸ್’ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕ ಚುನಾವಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬಿಹಾರ ಚುನಾವಣೆ ಹಾಗೂ ದೆಹಲಿ ಚುನಾವಣೆ ವಿಷಯಗಳಿವೆ.

ಕೋವಿಡ್–19 ಕಾರಣದಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಈ ವರ್ಷ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು