ಶನಿವಾರ, ಅಕ್ಟೋಬರ್ 31, 2020
22 °C

IPL-2020 | ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ; ಧೋನಿ ಪಡೆಗೆ 44 ರನ್ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 131 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಡೆಲ್ಲಿ ಪಡೆ 44 ರನ್‌ ಅಂತರದ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್‌ ಅಯ್ಯರ್‌ ಪಡೆ, ಆರಂಭಿಕ ಪೃಥ್ವಿ ಶಾ ಗಳಿಸಿದ ಅರ್ಧಶತಕದ ನೆರವಿನಿಂದ 175 ರನ್‌ ಕಲೆಹಾಕಿದ್ದು. 43 ಎಸೆತಗಳನ್ನು ಎದುರಿಸಿದ್ದ ಶಾ 9 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 64 ರನ್‌ ಗಳಿಸಿದ್ದರು. ಅನುಭವಿ ಶಿಖರ್‌ ಧವನ್ (35), ರಿಷಭ್‌ ಪಂತ್ (ಅಜೇಯ 37) ಮತ್ತು ನಾಯಕ ಶ್ರೇಯಸ್‌ ಅಯ್ಯರ್ (26)‌ ಅವರೂ ಉಪಯುಕ್ತ ಆಟವಾಡಿದರು.

ಈ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಬ್ಯಾಟ್ಸ್‌ಮನ್‌ಗಳಿಗೆ ಡೆಲ್ಲಿ ಬೌಲರ್‌ಗಳು ತಡೆಯೊಡ್ಡಿದರು. ತಂಡದ ಮೊತ್ತ 44 ರನ್ ಆಗುವಷ್ಟರಲ್ಲಿ ಚೆನ್ನೈನ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಈ ತಂಡ 10 ಓವರ್‌ ಮುಕ್ತಾಯಕ್ಕೆ ಗಳಿಸಿದ್ದು ಕೇವಲ 48 ರನ್‌. ಇದು ಈ ಬಾರಿ ಯಾವುದೇ ತಂಡ ಮೊದಲ ಹತ್ತು ಓವರ್‌ನಲ್ಲಿ ಗಳಿಸಿದ ಅತ್ಯಂತ ಕನಿಷ್ಠ ರನ್‌.

ಫಾಫ್‌ ಡು ಪ್ಲೆಸಿ (43), ಕೇದಾರ್ ಜಾಧವ್‌ (26) ಹೊರತುಪಡಿಸಿ ಚೆನ್ನೈ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.

ಡೆಲ್ಲಿ ಪರ ಕಗಿಸೊ ರಬಾಡ ಮೂರು, ಎನ್ರಿಚ್‌ ನೊರ್ಟ್ಜೆ ಎರಡು ವಿಕೆಟ್‌ ಪಡೆದರೆ, ಅಕ್ಷರ್ ಪಟೇಲ್‌ 1 ವಿಕೆಟ್‌ ಉರುಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು