ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ಟ್ರೆಂಟ್‌–ಬೂಮ್ರಾ ಆಟಕ್ಕೆ ಒಲಿದ ಜಯ; ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ

Last Updated 23 ಅಕ್ಟೋಬರ್ 2020, 17:46 IST
ಅಕ್ಷರ ಗಾತ್ರ

ಶಾರ್ಜಾ: ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ಶುಕ್ರವಾರ ಪಂದ್ಯದ ಮೊದಲ ಇನಿಂಗ್ಸ್‌ನ ಆರಂಭದ ಓವರ್‌ಗಳಲ್ಲಿಯೇ ಮುಂಬೈ ಇಂಡಿಯನ್ಸ್‌ ತಂಡದ ಜಯವನ್ನು ಖಚಿತಪಡಿಸಿದರು.

ಕಳಪೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ವಿರುದ್ಧ ಮುಂಬೈ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ನಾಯಕತ್ವ ವಹಿಸಿದ್ದ ಕೀರನ್ ಪೊಲಾರ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಟ್ರೆಂಟ್ ಬೌಲ್ಟ್‌ (18ಕ್ಕೆ 4) ಮತ್ತು ಬೂಮ್ರಾ (25ಕ್ಕೆ2) ದಾಳಿಗೆಐವತ್ತು ರನ್‌ಗಳೊಳಗೆ ಆಲೌಟ್ ಆಗುವ ಭೀತಿಯನ್ನು ಚೆನ್ನೈ ಎದುರಿಸಿತ್ತು. 43 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಸ್ಯಾಮ್ ಕರನ್ (52; 47ಎಸೆತ, 4ಬೌಂಡರಿ, 2ಸಿಕ್ಸರ್) ಏಕಾಂಗಿ ಹೋರಾಟದಿಂದಾಗಿ ತಂಡವು 20 ಓವರ್‌ಗಳಲ್ಲಿ 9ಕ್ಕೆ 114 ರನ್ ಗಳಿಸಿತು.

ಈ ಮೊತ್ತವನ್ನು ಬೆನ್ನತ್ತಿದ ಮುಂಬೈನ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ (ಔಟಾಗದೆ 46) ಮತ್ತು ಇಶಾನ್ ಕಿಶನ್ (ಬ್ಯಾಟಿಂಗ್ 68) 12.2 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.

ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಸಲ ಚೆನ್ನೈ ತಂಡವು ಎಂಟು ಪಂದ್ಯಗಳಲ್ಲಿ ಸೋತ ದಾಖಲೆಯಾಯಿತು.ಈ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಚೆನ್ನೈ ಎದುರು ಸೋತಿದ್ದ ಮುಂಬೈ ತಂಡವು ಸೇಡು ತೀರಿಸಿಕೊಂಡಿತು.ಮಾತ್ರವಲ್ಲದೆ10 ಪಂದ್ಯಗಳನ್ನುಆಡಿ 7ನೇ ಗೆಲುವು ಸಾಧಿಸಿದ ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತಒಟ್ಟು 11 ಪಂದ್ಯಗಳನ್ನು ಆಡಿರುವ ಮಹೇಂದ್ರಸಿಂಗ್ ಧೋನಿ ಬಳಗವು ಕೇವಲ ಮೂರು ಪಂದ್ಯಗಳಲ್ಲಿ ಗೆದ್ದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್‌ ಅವಕಾಶ ಕೈತಪ್ಪಿದೆ.

ಸ್ಯಾಮ್ ದಿಟ್ಟತನ:ಚೆನ್ನೈ ಇನಿಂಗ್ಸ್‌ನಲ್ಲಿ ಸ್ಯಾಮ ಕರನ್ ಬ್ಯಾಟಿಂಗ್ ಮತ್ತು ಇಮ್ರಾನ್ ತಾಹೀರ್(ಔಟಾಗದೆ 13; 10ಎಸೆತ, 2ಬೌಂಡರಿ) ಆತ್ಮವಿಶ್ವಾಸದ ಬ್ಯಾಟಿಂಗ್ ಮಾತ್ರಒಳ್ಳೆಯ ನೆನಪುಗಳಾಗಿ ಉಳಿಯುತ್ತವೆ.

ಈ ಪಂದ್ಯದಲ್ಲಿ ಚೆನ್ನೈ ತಂಡದಲ್ಲಿ ಅವಕಾಶ ಪಡೆದ ಯುವ ಆಟಗಾರರು ಗೆಲುವಿನ ‘ಕಿಡಿ’ತೋರ್ಪಡಿಸಲಿಲ್ಲ.ಋತುರಾಜ್ ಗಾಯಕವಾಡ್, ಜಗದೀಶನ್ಕ್ರೀಸ್‌ನಲ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಅನುಭವಿ ಅಂಬಟಿ ರಾಯುಡು, ಫಾಫ್ ಡುಪ್ಲೆಸಿ ಮತ್ತು ರವೀಂದ್ರ ಜಡೇಜ ಅವರಿಂದಲೂ ರನ್‌ ಗಳಿಕೆಯಾಗಲಿಲ್ಲ.

ಸ್ಯಾಮ್ ಕರನ್ ಬಿಟ್ಟರೆ, ಧೋನಿ (16; 16ಎಸೆತ), ಶಾರ್ದೂಲ್ ಠಾಕೂರ್ ಮತ್ತು ತಾಹೀರ್ ಮಾತ್ರ ಎರಡಂಕಿ ಗಳಿಸಿದರು. ಎರಡು ಬೌಂಡರಿ, ಒಂದು ಸಿಕ್ಸರ್ ಬಾರಿಸಿ ಚೇತರಿಕೆ ನೀಡುವ ಭರವಸೆ ಮೂಡಿಸಿದ್ದರು.ಆದರೆ ರಾಹುಲ್ ಚಾಹರ್ ಲೆಗ್‌ ಸ್ಪಿನ್ನಲ್ಲಿ ಏಮಾರಿದ ಧೋನಿ, ಡಿಕಾಕ್‌ಗೆ ಕ್ಯಾಚ್ ನೀಡಿದರು.ಆದರೆ ಎಡಗೈ ಬ್ಯಾಟ್ಸ್‌ಮನ್ ಸ್ಯಾಮ್ ಕರನ್ ಮಾತ್ರ ರನ್‌ ಗಳಿಕೆಯಲ್ಲಿ ನಿರತರಾಗಿದ್ದರು. ಇನಿಂಗ್ಸ್‌ನಕೊನೆಯ ಎಸೆತದಲ್ಲಿ ಟ್ರೆಂಟ್‌ ಬೌಲ್ಟ್‌ ಯಾರ್ಕರ್‌ಗೆ ಕ್ಲೀನ್‌ ಬೌಲ್ಡ್ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT