ದುಬೈ: ರಾಜಸ್ಥಾನ ರಾಯಲ್ಸ್ ನೀಡಿದ ಬೃಹತ್ ಗುರಿಯೆದುರು ಕೊನೆವರೆಗೂ ಹೋರಾಟ ನಡೆಸಿದ ಸಿಎಸ್ಕೆ 16 ರನ್ಗಳ ಸೋಲೊಪ್ಪಿಕೊಂಡಿತು.

ಟಾಸ್ ಸೋತರೂ ದೊರೆತ ಮೊದಲುಬ್ಯಾಟಿಂಗ್ ಮಾಡುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು.ಸಂಜು ಸ್ಯಾಮ್ಸನ್ ಹಾಗೂನಾಯಕಸ್ಟೀವ್ ಸ್ಮಿತ್ ಗಳಿಸಿದ ಅರ್ಧಶತಕ ಸಿಡಿಸಿದರು.ಒಂಭತ್ತು ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದಸ್ಯಾಮ್ಸನ್ ಕೇವಲ 32 ಎಸೆತಗಳಲ್ಲಿ 74 ರನ್ ಗಳಿಸಿದರೆ, ಸ್ಮಿತ್ 47ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 69 ರನ್ ಗಳಿಸಿದರು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ಗೆಸಿಕೇವಲ 37 ಎಸೆತಗಳಲ್ಲಿ 7 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 72 ರನ್ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.

ರಾಯಲ್ಸ್ ಪರರಾಹುಲ್ ತೆವಾತಿಯಾ 37 ರನ್ ನೀಡಿ 3 ವಿಕೆಟ್ ಪಡೆದರು. ಜೋಫ್ರಾ ಆರ್ಚರ್, ಶ್ರೇಯಸ್ ಗೋಪಲ್ ಮತ್ತು ಟಾಮ್ ಕರನ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಸಿಡಿದದ್ದು33 ಸಿಕ್ಸರ್!
ಈ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟ್ಸ್ಮನ್ಗಳುಒಟ್ಟು 416 ರನ್, 18 ಬೌಂಡರಿ ಮತ್ತು33 ಸಿಕ್ಸರ್ಗಳನ್ನು ಬಾರಿಸಿದರು.

ಇಂದು ರಾಯಲ್ಸ್ ಪರಸಂಜು ಸ್ಯಾಮ್ಸನ್ 9, ಸ್ಟೀವ್ ಸ್ಮಿತ್ಮತ್ತು ಜೋಫ್ರಾ ಆರ್ಚರ್ ತಲಾ 4 ಸಿಕ್ಸರ್ ಸಿಡಿಸಿದ್ದಾರೆ. ಸಿಎಸ್ಕೆ ಪರ ಫಾಪ್ 7,ಶೇನ್ ವಾಟ್ಸನ್ 4, ಧೋನಿ 3 ಮತ್ತು ಸ್ಯಾಮ್ ಕರನ್ 2 ಸಿಕ್ಸರ್ ಬಾರಿಸಿದರು.

ಟೂರ್ನಿಯಲ್ಲಿ ಇದುವರೆಗೆ ಒಟ್ಟು 63 ಸಿಕ್ಸರ್ಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.